ಬೆಳಗಾವಿಯ ಬಾಕ್ಸೈಟ್ ರಸ್ತೆಯ ಉಷಾ ಕಾಲನಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅನಿಲ್ ಬೆನಕೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಬೆಳಗಾವಿ ನಗರದ ಬಾಕ್ಸೈಟ್ ರಸ್ತೆಯ ಉಷಾ ಕಾಲನಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅನಿಲ್ ಬೆನಕೆ, ಪಂಚಾಕ್ಷರಿ ಹಿರೇಮಠ, ಸುಜೀತ್ ಮುಳಗುಂದ್, ಪ್ರವೀಣ್ ಮೋತಿಮಠ, ರಾಜು ಪಾಟೀಲ್, ಕಲ್ಲಪ್ಪ ಗಾಣೀಗೇರ, ವಿರುಪಾಕ್ಷಪ್ಪ ಹಾದಿಮನಿ, ನಿರಂಜನ ಶಾಸ್ತ್ರೀ, ಶಂಕರಯ್ಯ ಹಾಗೂ ಬಸವರಾಜ್ ಹಳಿಂಗಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭದ ಯಶಸ್ಸಿಗೆ ಐ.ವಿ. ಹಿರೇಮಠ, ಸತೀಶ್ ಮಾಳವದೆ, ನಾಗೇಶ್ ಪಾಟೀಲ್, ಪ್ರಕಾಶ್ ಹೆಗಡೆ, ಸಾಗರ ವರ್ಪೆ, ಪ್ರಭು ಸವದತ್ತಿ ಸೇರಿದಂತೆ ಸ್ಥಳೀಯ ಭಕ್ತರು ಹಾಗೂ ಮುಖಂಡರು ಶ್ರಮಿಸಿದರು.
