Belagavi

ಮಿನಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬೆಳಗಾವಿ ಕ್ರೀಡಾಪಟುಗಳಿಗೆ ಭರತೇಶ್ ಶಿಕ್ಷಣ ಸಂಸ್ಥೆ ಮತ್ತು ವೇಟ್‌ಲಿಫ್ಟಿಂಗ್ ಸಂಸ್ಥೆಯಿಂದ ಸನ್ಮಾನ

Share

ಬೆಂಗಳೂರಿನಲ್ಲಿ ನಡೆದ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ಬೆಳಗಾವಿಗೆ ಕೀರ್ತಿ ತಂದ ಇಬ್ಬರು ಯುವ ಕ್ರೀಡಾಪಟುಗಳನ್ನು ಭರತೇಶ್ ಶಿಕ್ಷಣ ಸಂಸ್ಥೆ ಹಾಗೂ ಬೆಳಗಾವಿ ಜಿಲ್ಲಾ ವೇಟ್‌ಲಿಫ್ಟಿಂಗ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಾಧಕರ ಪರಿಶ್ರಮವನ್ನು ಶ್ಲಾಘಿಸಿ ಗಣ್ಯರು ಪ್ರೋತ್ಸಾಹಿಸಿದರು.

ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಮೋಘ ಸಾಧನೆಗೈದು ಬೆಳಗಾವಿಗೆ ಕೀರ್ತಿ ತಂದ ಇಬ್ಬರು ಭರವಸೆಯ ಕ್ರೀಡಾಪಟುಗಳನ್ನು ಭರತೇಶ್ ಶಿಕ್ಷಣ ಸಂಸ್ಥೆ ಹಾಗೂ ಬೆಳಗಾವಿ ಜಿಲ್ಲಾ ವೇಟ್‌ಲಿಫ್ಟಿಂಗ್ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇಟ್‌ಲಿಫ್ಟಿಂಗ್‌ನ 61+ ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಕುಮಾರಿ ಆಯುಷಿ ಧಾಮ್ನೇಕರ್ ಹಾಗೂ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಅರ್ನವ್ ಗೋಡ್ಯಾಳ್ಕರ್ ಅವರ ಕಠಿಣ ಪರಿಶ್ರಮ ಮತ್ತು ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ವೇಟ್‌ಲಿಫ್ಟಿಂಗ್ ಸಂಸ್ಥೆಯ ಅಧ್ಯಕ್ಷ ಹೀರಾಚಂದ್ ಕಲ್ಮನಿ, ಉಪಾಧ್ಯಕ್ಷ ಸುನೀಲ್ ಆಪ್ಟೇಕರ್, ಭರತೇಶ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ವಿನೋದ್ ದೊಡ್ಡಣ್ಣವರ್, ವೇಟ್‌ಲಿಫ್ಟಿಂಗ್ ಸಂಸ್ಥೆಯ ಕಾರ್ಯದರ್ಶಿ ನೀತಾ ಗಂಗರಡ್ಡಿ, ತರಬೇತುದಾರ ಹಾಗೂ ಜಂಟಿ ಕಾರ್ಯದರ್ಶಿ ಸದಾನಂದ ಮಾಳಶೆಟ್ಟಿ, ಖಜಾಂಚಿ ಅನುರಾಧಾ ತಿಗಡಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರದೀಪ್ ಜುವೇಕರ್ ಮತ್ತು ಆಕಾಶ್ ಮಂಡೋಲ್ಕರ್ ಉಪಸ್ಥಿತರಿದ್ದು, ಯುವ ಕ್ರೀಡಾಪಟುಗಳು ಮುಂದೆಯೂ ಜಿಲ್ಲೆ ಮತ್ತು ರಾಜ್ಯಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಹಾರೈಸಿದರು.

Tags:

error: Content is protected !!