Dharwad

ಯೋಗೇಶಗೌಡ ಕೊಲೆ ಕೇಸ್: ಸುಪ್ರೀಂ ವಿಚಾರಣೆ ಅ.27ಕ್ಕೆಮುಂದೂಡಿಕೆ

Share

ಧಾರವಾಡ:ವಿನಯ ಕುಲಕರ್ಣಿಗೆ ಯೋಗೇಶಗೌಡ ಕೊಲೆ ಕೇಸಿನಿಂದ ಹೈಕೋರ್ಟ್ ಬಿಗ್ ರಿಲೀಫ್ ಸಿಕ್ಕ ವಿಚಾರಕ್ಕೆ ಸಂಬಂಧಿಸಿ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಯೋಗೇಶಗೌಡ ಸಹೋದರ ಹಾಗೂ ಸಿಬಿಐನಿಂದ ಅರ್ಜಿ ಸಲ್ಲಿಕೆಯಾಗಿದ್ದು, ಮತ್ತೆ ಅಕ್ಟೋಬರ್ ಇಪ್ಪತ್ತೇಳಕ್ಕೆ ವಿಚಾರಣೆ ಮುಂದೂಡಿಕೆಯಾಗಿದೆ.

ಯೋಗೇಶಗೌಡ ಕೊಲೆ ಪ್ರಕರಣದ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯವು ವಿನಯ ಕುಲಕರ್ಣಿ ಸೇರಿ ಹದಿನೇಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದ ಹಿನ್ನೆಲೆ ಇದನ್ನು ಪ್ರಶ್ನೆ ಮಾಡಿ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲು ಹತ್ತಿ ಶಿಕ್ಷೆಗೆ ತಡೆ ಹಾಗೂ ಜಾಮೀನು ಪಡೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಯೋಗೇಶಗೌಡ ಸಹೋದರ ಹಾಗೂ ಸಿಬಿಐ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದರು. ಈ ಅರ್ಜಿ ವಿಚಾರಣೆ ಈಗ ಮತ್ತೆ ಅಕ್ಟೋಬರ್ ಇಪ್ಪತ್ತೇಳಕ್ಕೆ ಮುಂದೂಡಿಕೆ ಆಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣಾ ದಿನಾಂಕ‌ ನಿಗದಿಯಾಗಿತ್ತು. ಈ ಹಿಂದೆ ಅರ್ಜಿ ಪುರಸ್ಕರಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಇಂತಹ ಗಂಭೀರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದವರು ವಿಧಾನಸೌಧದಲ್ಲಿ ಇರಬೇಕಾ, ಇಂತವರು ಇದ್ದರೆ ಮುಂದಿನ ದಿನಗಳಲ್ಲಿ ದರೋಡೆಕೋರರು ವಿಧಾನಸೌಧಕ್ಕೆ ಬರುವುದರಲ್ಲಿ ಆಶ್ಚರ್ಯ ಇಲ್ಲ ಎಂದು ಮೌಖಿಕವಾಗಿ ಪ್ರಶ್ನೆ ಮಾಡಿದರು. ಅಂದು ಅರ್ಜಿ ಪುರಸ್ಕರಿಸಿ ಇಂದು ವಿಚಾರಣೆಗೆ ಮುಂದೂಡಲಾಗಿತ್ತು. ಆದರೆ ಸಿಬಿಐನಿಂದ ಮೂರು ಅರ್ಜಿಗಳು ಹಾಗೂ ಯೋಗೇಶಗೌಡ ಸಹೋದರ ಗುರುನಾಥಗೌಡರ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎಲ್ಲವನ್ನು ಒಟ್ಟಿಗೆ ವಿಚಾರಣೆ ಮಾಡುವುದಾಗಿ ತಿಳಿಸಿ‌ ಸುಪ್ರೀಂ ನ್ಯಾಯಾಧೀಶರು ವಿಚಾರಣೆಯನ್ನು ಅಕ್ಟೋಬರ್ ಇಪ್ಪತ್ತೇಳಕ್ಕೆ ಮುಂದೂಡಿಕೆ ಮಾಡಿದ್ದಾರೆ. ಸದ್ಯ ಈಗ ವಿನಯ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗುರುನಾಥಗೌಡರವರು, ಅರ್ಜಿಗಳ ಎಲ್ಲವನ್ನು ಒಟ್ಟಾಗಿ ತೆಗೆದುಕೊಳ್ಳುವ ಉದ್ದೇಶದಿಂದ ಇಪ್ಪತ್ತೇಳಕ್ಕೆ ಮುಂದೂಡಿರುವ ಮಾಹಿತಿ ಇದೆ, ಹತ್ತು ವರ್ಷಗಳಿಂದ ಹೋರಾಟಕ್ಕೆ ಬಹುತೇಕ‌ ಜಯ ಸಿಗುತ್ತಲೇ ಬಂದಿದೆ. ಸುಪ್ರೀಂನಲ್ಲೂ ನಮಗೆ ಗೆಲುವು ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

Tags:

error: Content is protected !!