Chikkodi

ಹಿರೇಕೋಡಿಯಲ್ಲಿ ವಿಠ್ಠಲ ರುಕ್ಮಿಣಿ ದೇವಸ್ಥಾನ ಉದ್ಘಾಟನೆ

Share

ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನವನ್ನು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಉದ್ಘಾಟಿಸಿದರು.

ಬಳಿಕ‌ ಮಾತನಾಡಿದ ಅವರು ಧಾರ್ಮಿಕ ಕಾರ್ಯಗಳು ಗ್ರಾಮದಲ್ಲಿ ನೆಮ್ಮದಿ, ಶಾಂತಿ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತವೆ. ಶ್ರೀ ವಿಠ್ಠಲ ರುಕ್ಮಿಣಿ ದೇವರ ಆಶೀರ್ವಾದದಿಂದ ಗ್ರಾಮಕ್ಕೆ ಕಾಲುವೆ ಮೂಲಕ ನೀರು ಹರಿದು ಬಂದಿದ್ದು, ಬರದ ಸಂಕಷ್ಟ ದೂರವಾಗಿ ರೈತರಿಗೆ ಅನುಕೂಲವಾಗಿದೆ.
ಬರಗಾಲದ ಸಂದರ್ಭದಲ್ಲಿ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದ ಹಿರೇಕೋಡಿ ಗ್ರಾಮಸ್ಥರಿಗೆ, ಕಾಲುವೆ ಮೂಲಕ ನೀರು ಹರಿದು ಬಂದಿರುವುದು ಸಾಕಷ್ಟು ನೆಮ್ಮದಿ ತಂದಿದೆ. ನೀರಿನ ಲಭ್ಯತೆ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ ಎಂದರು.

ಈ ಸಂದರ್ಭದಲ್ಲಿ ಪ್ರಲಾದ ಪಾಂಡವ, ಸುರೇಶ್ ಚೌಗಲೆ ಸೂರ್ಯಕಾಂತ ಚೌಗಲಾ, ಮಹದೇವ ಪವಾಡೆ ಚಂದ್ರಕಾಂತ್ ಲೋಕರೆ ಶಶಿಕಾಂತ್ ಲೋಕರೆ ಮಲ್ಲಿಕಾರ್ಜುನ ನಿಜಾಮ್ ಪಟೇಲ,ಶ್ರೀಶೈಲ್ ಕಮತೆ ಅಪ್ಪಾಸಾಹೇಬ ಕಮತೆ, ಅನ್ಸರ ಮುಜಾವರ ,ಸುರೇಶ್ ವಿಷ್ಣು ಪಾಂಡವ, ರಾಮಾ ಬಂಡಗರ ಬಾಬಾಸಾಹೇಬ ಗುದಿಮನಿ, ಮುನ್ನಾ ಪಟೇಲ,ಪ್ರಕಾಶ ಪಾಂಡವ, ಸತೀಶ್ ಪಾಂಡವ, ವಿಜಯ್ ಪಾಂಡವ ಸೇರಿದಂತೆ ಹಲವು ಮುಖಂಡರು, ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.

Tags:

error: Content is protected !!