ಬೆಳಗಾವಿಯಲ್ಲಿ ಶ್ರೀರಾಮ್ ಸೇವಾ ಸಂಕಲ್ಪ ವತಿಯಿಂದ ವಿದ್ಯಾರ್ಥಿ ವೇತನ (ಸ್ಕಾಂಡರ್‌ಶಿಪ್) ವಿತರಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾರಂಜಿ ಮಠದ ಶಿವಬಸವ ನಗರದ ಪೂಜ್ಯ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ವಹಿಸಿದ್ದರು. ಮಾಜಿ ಸಚಿವರು ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಕರ್ನಾಟಕ ಸರ್ಕಾರದ ಬೆಂಗಳೂರಿನ ಮಾನ್ಯ ವಿಧಾನ ಪರಿಷತ್ ಸದಸ್ಯರು ಆದ ಚನ್ನರಾಜ್ ಹಟ್ಟಿಹೊಳಿ, ಬೆಳಗಾವಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ ಹಾಗೂ ಬೆಳಗಾವಿ ವಕೀಲರಾದ ಸಂಜಯ್ ಟಿ. ಕುಚನೂರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಂಗಳೂರು ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆದ ಮಾನ್ಯ ಶ್ರೀ ಶ್ರೀಧರ್ ಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶ್ರೀರಾಮ ಫೈನಾನ್ಸ್ ಕಳೆದ 50 ವರ್ಷಗಳಿಂದ ಬಡವರ ಏಳ್ಗೆಗೆ ಶ್ರಮಿಸುತ್ತ, ಇಂದು ಹೆಮ್ಮೆರವಾಗಿ ಬೆಳೆದಿದೆ. ಇದರ ಸಂಸ್ಥಾಪಕರಾದ ದೇಶದ ಪ್ರಗತಿಗೆ ಶ್ರಮಿಸಿದ ತ್ಯಾಗರಾಜನ್ ಅವರಿಗೆ ಪದ್ಮವಿಭೂಷಣ್ ನೀಡಿ ಗೌರವಿಸಿದ್ದನ್ನು ಸ್ಮರಿಸಿದರು. ಸತತ ಪ್ರಯತ್ನದಿಂದಲೇ ಗುರಿ ಮುಟ್ಟಲು ಸಾಧ್ಯ. ವಿದ್ಯಾರ್ಥಿ ಜೀವನವೇ ಸುರ್ವಣಕ್ಷಣವಾಗಿದ್ದು, ಜೀವನದ ದಿಕ್ಕನ್ನು ನಿಶ್ಚಿಯಿಸುವ ಸುಸಮಯವಾಗಿದೆ. ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕವಷ್ಟೇ ಅಲ್ಲದೇ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಟಿವ್ಹಿ, ಮೊಬೈಲ್’ನಲ್ಲಿ ಕಾಲ ಹರಣ ಮಾಡದೇ, ತಂದೆ-ತಾಯಿಯ ಕನಸನ್ನು ನನಸಾಗಿಸಲು ಕಷ್ಪಪಟ್ಟು ಓದಬೇಕು. ಶ್ರೀರಾಮ ಫೈನಾನ್ಸ್’ನ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯನ್ನು ಪ್ರಶಂಸಿಸಿದರು.

ಕಾರ್ಯಕ್ರಮಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕಾರಂಜಿಮಠದ ಶ್ರೀ ಸಿದ್ದರಾಮ ಸ್ವಾಮಿಜೀಗಳು ಇವತ್ತು ನಿಮಗೆಲ್ಲ ವೇದಿಕೆಯಲ್ಲಿ ಇರುವಂತಹ ಎಲ್ಲಾ ಹಿರಿಯರು ಶಿಷ್ಯ ವೇತನವನ್ನು ನಿಮಗೆಲ್ಲ ಕೊಡುತ್ತಿದ್ದಾರೆ, ಅದನ್ನು ತೆಗೆದುಕೊಂಡು ಅಧ್ಯಯನಶೀಲರಾಗಿ, ಚಾರಿತ್ರ್ಯ ಬೆಳೆಸಿಕೊಳ್ಳಿ ಎಂದರು. ಇವತ್ತು ಮಕ್ಕಳಿಗೆ ನಾವು ಹೇಳಬೇಕಾಗಿರುವುದು ಬಹಳ ಇದೆ, ಇವತ್ತು ಚಿಕ್ಕ ವಯಸ್ಸಿನಲ್ಲಿ ನಿಮಗೆ ಗೊತ್ತಿದೆ, ಕೆಲವು ದುಷ್ಟ ಶಕ್ತಿಗಳು ದಾರಿ ತಪ್ಪಿಸುತ್ತಿದ್ದಾರೆ, ಅದಕ್ಕಾಗಿ ಮಕ್ಕಳು ಆ ದುಷ್ಟ ಶಕ್ತಿಗಳ ಬಲೆಗೆ ಪಶುವಾಗದೆ ನೀವು ನಿಮ್ಮ ಚಾರಿತ್ರ್ಯವನ್ನು ಬೆಳೆಸಿಕೊಳ್ಳಿ, ಅಧ್ಯಯನಶೀಲರಾಗಿ ನೀವು ಕೇವಲ ಶಾಲೆಯ ಅಧ್ಯಯನ ಅಷ್ಟೇ ಅಲ್ಲ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯವಾಗಿ ಕೂಡ ಕ್ರೀಡಾರಂಗದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಏರ್ಪಡಿಸಲಾದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸ್ಕಾಲರ್‌ಶಿಪ್ ಪ್ರೋಗ್ರಾಂ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಚೇರ್ಮನ್ ಆರ್.ಟಿ. ತ್ಯಾಗರಾಜನ್ ಅವರು ಮಾತನಾಡಿ, 1979ರಲ್ಲಿ ಕೇವಲ 1 ಲಕ್ಷ ಬಂಡವಾಳ ಮತ್ತು ಒಂದೇ ಒಂದು ಶಾಖೆಯೊಂದಿಗೆ ಆರಂಭವಾದ ಶ್ರೀರಾಮ್ ಫೈನಾನ್ಸ್ ಇಂದು ದೇಶಾದ್ಯಂತ ಸುಮಾರು 3,225 ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು, ಸಾರಿಗೆ ಕ್ಷೇತ್ರಕ್ಕೆ ಮತ್ತು ಜಿಡಿಪಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದೆ ಎಂದರು. ಲಾರಿ ಚಾಲಕರು, ಮಾಲೀಕರು ಹಾಗೂ ಸಣ್ಣ ಉದ್ಯಮಿಗಳ ವಿಶ್ವಾಸವೇ ಸಂಸ್ಥೆಯ ಯಶಸ್ಸಿಗೆ ಕಾರಣವಾಗಿದ್ದು, ಕೇವಲ ಟ್ರಕ್‌ಗಳಿಗೆ ಸಾಲ ನೀಡುವುದಷ್ಟೇ ಅಲ್ಲದೆ ಡೀಸೆಲ್ ಹಾಗೂ ಟೈರ್ ಬದಲಾವಣೆಯಂತಹ ಅಗತ್ಯ ಸೌಲಭ್ಯಗಳ ಮೂಲಕ ಗ್ರಾಹಕರು ಮತ್ತು ನೌಕರರ ಬೆಂಬಲದೊಂದಿಗೆ ಸಂಸ್ಥೆಯು ನಿರಂತರವಾಗಿ ಬೆಳೆದು ಬಂದಿದೆ ಎಂದು ತಿಳಿಸಿದರು.
ಬೆಂಗಳೂರಿನ ಜೋನಲ್ ಬಿಸಿನೆಸ್ ಹೆಡ್ ರಾಮಲಿಂಗೇಗೌಡ, ಬೆಂಗಳೂರಿನ ಎಚ್.ಆರ್.ಹೆಡ್ ಉದಯ್ ಚನ್ನವರ, ಬೆಂಗಳೂರಿನ ಬಿ.ಯು. ಇನ್ವೆಸ್ಟ್‌ಮೆಂಟ್ ಹೆಡ್ ವಿಜಯಕುಮಾರ್ ಪಿ. ಜಿ., ಬೆಂಗಳೂರಿನ ಜೋನಲ್ ಸೇಲ್ಸ್ ಹೆಡ್ ಶಿವಾನಂದ ಸವದತ್ತಿ ಮತ್ತು ಬೆಂಗಳೂರಿನ ಜೋನಲ್ ಕಲೆಕ್ಷನ್ ಹೆಡ್ ಆದಿತ್ಯ ಕೆ. ಎ. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ರೀಜನಲ್ ಬಿಸಿನೆಸ್ ಹೆಡ್ ಈರಣ್ಣ ದಾಡಿಭಾವಿ, ಗ್ರೀನ್ ಫೈನಾನ್ಸ್ ಹೆಡ್ ಹಾಗೂ ಬೆಳಗಾವಿ ಶಾಖಾ ವ್ಯವಸ್ಥಾಪಕರು ಹಾಗೂ ಶ್ರೀರಾಮ್ ಫೈನಾನ್ಸ್ ಬೆಳಗಾವಿ ರೀಜನ್ ಸಿಬ್ಬಂದಿ ವರ್ಗದವರು ಸರ್ವರಿಗೂ ಸುಸ್ವಾಗತ ಕೋರಿದರು.
