ತಾಲೂಕಿನ ವಾಳಕಿ ಗ್ರಾಮದಲ್ಲಿ 25 ಲಕ್ಷರೂ. ಅನುದಾನದಲ್ಲಿ ನಿರ್ಮಾಣಗೊಂಡ ಜಗಜ್ಯೋತಿ ಬಸವೇಶ್ವರ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡವನ್ನು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು. ತಾವು ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಕಳೆದ 3 ವರ್ಷಗಳಲ್ಲಿ ವಾಳಕಿ ಗ್ರಾಮಕ್ಕೆ 10.21 ಕೋಟಿ ಅನುದಾನ ಮಂಜೂರು ಮಾಡಿರುವುದಾಗಿ ಹೇಳಿದರು.

ವಾಳಕಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 18 ಲಕ್ಷರೂ, ಪ.ಪಂಗಡ ಕಾಲೋನಿಗಳಲ್ಲಿ ರಸ್ತೆ-ಚರಂಡಿ ನಿರ್ಮಾಣಕ್ಕೆ 50 ಲಕ್ಷರೂ, ಗ್ರಾಮ ಪರಿಮಿತಿ ರಸ್ತೆ ಡಾಂಬರಿಕರಣ ಚರಂಡಿ ನಿರ್ಮಾಣಕ್ಕೆ 50ಲಕ್ಷರೂ, ವಾಳಕಿ ಪರಿಶಿಷ್ಟ ಜಾತಿ ಕಾಲೋನಿಯ ಕುರಣೆ, ಘಸ್ತೆ, ಶಿಂಗೆ, ಗೌಂಡಿ, ತರಾಳ, ಕಟ್ಟಿ, ಲಾಟಕರ ಮನೆಗಳ ಮುಖಾಂತರ ಅಂಬೇಡ್ಕರ ಭವನದಿಂದ ಮುಖ್ಯ ರಸ್ತೆಯವರೆಗೆ ಸಿ.ಸಿ. ರಸ್ತೆ, ಚರಂಡಿ ನಿರ್ಮಾಣಕ್ಕೆ 75 ಲಕ್ಷರೂಪಾಯಿ
ವಾಳಕಿ ಗ್ರಾಮದ ಕಣಗಲಾ ರಸ್ತೆಯ ಭಾಗೀರಥಿ ದೇವಸ್ಥಾನ, ಪಾಟೀಲ, ಚೌಗುಲಾ, ಖೋತ ಇತರೆ ವಸಹಾತುಗಳಲ್ಲಿ ರಸ್ತೆ ಸುಧಾರಣೆಗೆ 2.30 ಕೋಟಿ ರೂ. ವಾಳಕಿ-ಕಣಗಲಾ ತಾಲೂಕಾ ಗಡಿಯವರೆಗೆ ರಸ್ತೆ ಸುಧಾರಣೆ 4.50 ಕೋಟಿ ರೂ. ಸರ್ಕಾರಿ ಪಬ್ಲಿಕ್ ಶಾಲೆಗೆ 4 ಕೊಠಡಿಗಳ ನಿರ್ಮಾಣಕ್ಕೆ
59.30 ಲಕ್ಷ, ವಾಳಕಿ ಗ್ರಾಮದ ಗಣೇಶ ದೇವಸ್ಥಾನ ಕಟ್ಟಡ ಪೂರ್ತಿಗೊಳಿಸಲು ರೂ.20.00 ಲಕ್ಷ, ಜಗಜ್ಯೋತಿ ಬಸವೇಶ್ವರ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 20 ಲಕ್ಷರೂ ಹಾಗೂ ಪರಿಶಿಷ್ಟ ಜಾತಿ ಮಾತಂಗಿ ಸಮಾಜದ ಅಭಿವೃದ್ಧಿ, ಸ್ಮಶಾನ ಭೂಮಿ ಅಭಿವೃದ್ಧಿಗೆ 20 ಲಕ್ಷರೂ ಅನುದಾನ ಮಂಜೂರು ಮಾಡಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ನಿಪ್ಪಾಣಿಯ ಪ್ರಾಣಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸುಜಯ ಪಾಟೀಲ, ಜಿ.ಪಂ ಮಾಜಿ ಸದಸ್ಯ ಅಣ್ಣಾಸಾಹೇಬ ನಾಯಿಕ, ರಾಮು ಕಮತೆ, ವಿನೋದ ಕಾಗೆ, ರಾಹುಲ ಡೋಣೆ, ಖಂಡೆರಾವ ಪಾಟೀಲ, ಕಲಗೌಡ ಖೋತ, ಅಣ್ಣಾಸಾಬ ಖೋತ, ಕಲಗೌಡಾ ಖೋತ, ಬಸಗೌಡಾ ಖೋತ, ಮಹಾದೇವ ಕೌಲಾಪೂರೆ,ಬಾಳಗೌಡ ಖೋತ,ಎಂ.ಬಿ.ಖೋತ,ಅಜೀತ ನಾಯಿಕ,ಅನೀಲ ಸಂಕನವಾಡಿ,ಅಕ್ಕಾತಾಯಿ ರಾವಸಾಹೇಬ ಖೋತ,ಮಂಗಲಾ ಕಾಂತಪ್ಪಾ ಖಿರಾಯಿ,ಅನುರಾಧಾ ಸಚಿನ ಖೋತ,ಯಶವಂತ ಪಾಟೀಲ ರಾಜು ಗೋಮಾಯಿ, ರಾಜು ಪಾಟೀಲ, ಸುಕುಮಾರ ಡಿಗರೆ,ಕಾರ್ಯದರ್ಶಿ ದೇವೆಂದ್ರ ಪಠಾಡೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
