ಚಿಕ್ಕೋಡಿ: ತಾಲೂಕಿನ ನಣದಿ ಶರ್ಯತ್ತು ಮೈದಾನದ ಸಮೀಪದಲ್ಲಿ ಬೈಕ್‌ನ ಎರಡು ಚಕ್ರಗಳನ್ನು ಕಳ್ಳರು ಕದ್ದು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಮಲಿಕವಾಡ ಗ್ರಾಮದ ನಿವಾಸಿಗೆ ಸೇರಿದ Hero Honda Splendor ಬೈಕ್ KA 23 H 3858 ಸಂಖ್ಯೆಯ ವಾಹನವಾಗಿದೆ. ಶರ್ಯತ್ತು ಮೈದಾನದ ಬಳಿ ಖದೀಮರು ಬೈಕ್‌ನ ಚಕ್ರಗಳನ್ನು ಮಾತ್ರ ಬಿಚ್ಚಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಸದಲಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳೀಯ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
