Chikkodi

ಜಡಜಟ್ಟಿಗಳಂತೆ ಕಣಕ್ಕಿಳಿದ ಪೈಲ್ವಾನರ ಸಾಹಸ ಪ್ರದರ್ಶನ,ಜನಮನ ಸೆಳೆದ ಕುಸ್ತಿ ಪಂದ್ಯಾವಳಿ

Share

ಚಿಕ್ಕೋಡಿಯ ಪ್ರಸಿದ್ಧ ಪರಟಿನಾಗಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಸಹ ರೋಮಾಂಚನಕಾರಿ ಕುಸ್ತಿ ಪಂದ್ಯಾವಳಿಯನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ಪ್ರಸಿದ್ಧ ಮಲ್ಲರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.

ಚಿಕ್ಕೋಡಿಯ ಪರಟಿನಾಗಲಿಂಗೇಶ್ವರ ಅಖಾಡದಲ್ಲಿ ಜಿದ್ದಾಜಿದ್ದಿನ ಕುಸ್ತಿ ಕದನ ಏರ್ಪಟ್ಟಿತ್ತು. ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಈ ಅಖಾಡಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಒಟ್ಟು 55 ಜೋಡಿ ಪ್ರಸಿದ್ಧ ಪೈಲ್ವಾನರು ಆಗಮಿಸಿ, ಬದ್ಧ ವೈರಿಗಳಂತೆ ಪರಸ್ಪರ ಸೆಣಸಾಡಿದರು. ಜಡಜಟ್ಟಿಗಳಂತೆ ಕಣಕ್ಕಿಳಿದ ಪೈಲ್ವಾನರ ಸಾಹಸ ಪ್ರದರ್ಶನವನ್ನು ವೀಕ್ಷಿಸಲು ಜನಸ್ತೋಮವೇ ಹರಿದು ಬಂದಿತ್ತು.

ಜಾತ್ರಾಮಹೋತ್ಸವ ಅಂಗವಾಗಿ ಪರಟಿನಾಗಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ,ಪುನಸ್ಕಾರ,ಆರತಿ,ನೈವ್ಯದ, ಮಹಾಪ್ರಸಾದ,ಪಲ್ಲಕಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಭಕ್ತರು ‌ಅತ್ಯಂತ ಭಕ್ತಿಭಾವದಿಂದ ಪರಟಿನಾಗಲಿಂಗೇಶ್ವರ ದೇವರ ದರ್ಶನ ಪಡೆದು ಪಾವನರಾದರು.ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಹಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.

ಈ ಬಾರಿಯ ಕುಸ್ತಿ ಪಂದ್ಯಾವಳಿಯಲ್ಲಿ ಭಾಗಿಯಾದ ಕುಸ್ತಿ ಪಟುಗಳಿಗೆ ನಗದು ಬಹುಮಾನ ಹಾಗೂ ಆತ್ಮೀಯ ಸತ್ಕಾರ ನೀಡಿ ಗೌರವಿಸಲಾಯಿತು. ಗ್ರಾಮೀಣ ಭಾಗದಲ್ಲಿ ನಶಿಸಿಹೋಗುತ್ತಿರುವ ಸಾಂಪ್ರದಾಯಿಕ ಕ್ರೀಡೆಯನ್ನು ಜೀವಂತವಾಗಿಡುವ ಉದ್ದೇಶದಿಂದ ಈ ಅಖಾಡವನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ.

ಪರಟಿನಾಗಲಿಂಗೇಶ್ವರ ಕುಸ್ತಿ ಮೈದಾನಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಇಂದಿನ ದಿನಗಳಲ್ಲಿ ನಶಿಸಿಹೋಗುತ್ತಿರುವ ದೇಸಿ ಕ್ರೀಡೆಯಾದ ಕುಸ್ತಿಯನ್ನು ಜೀವಂತವಾಗಿಡಲು ಮತ್ತು ಯುವ ಪೈಲ್ವಾನರಿಗೆ ಪ್ರೋತ್ಸಾಹ ನೀಡಲು ನಾವು ಪ್ರತಿವರ್ಷ ಈ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದೇವೆ.

ಈ ವೈಭವೋಪೇತ ಕ್ರೀಡಾ ಕೂಟದ ಆಯೋಜನೆಯಲ್ಲಿ ಪ್ರಕಾಶ ಮುಚಂಡಿ,ಸತೀಶ ಘೋರ್ಪಡೆ,ಅನೀಲ ಮಾನೆ, ಅಜಯ ಕವಟಗಿಮಠ, ಭರತ ಜುಗೂಳೆ, ಬಾಳು ಮಾನೆ, ರಮೇಶ ಚನ್ನವರ, ಸಂಜಯ ಭೋಸಲೆ, ಬಸವರಾಜ ಮುಸುಂಡಿ, ಹಾಗೂ ದಿಲೀಪ ಸಮ್ಮತಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಪಂದ್ಯಾವಳಿಗೆ ಮೆರುಗು ನೀಡಿದರು.

Tags:

error: Content is protected !!