ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಚಿಕ್ಕೋಡಿ ತಾಲೂಕಿನ ಮೂರು ರೈತ ಕುಟುಂಬಗಳಿಗೆ ಶಾಸಕ ಗಣೇಶ ಹುಕ್ಕೇರಿ ಅವರು ತಲಾ 5 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ವಿತರಿಸಿದರು.

ಯಡೂರವಾಡಿ ಗ್ರಾಮದ ಮೃತ ರೈತ ರಾಮಚಂದ್ರ ಪಿರಾಜೆ, ಚಂದೂರ ಗ್ರಾಮದ ಕೃಷ್ಣಾ ಮಾನೆ ಹಾಗೂ ದತ್ತಾ ಉಗಾರೆ ಅವರ ಕುಟುಂಬದ ಸದಸ್ಯರಿಗೆ ಈ ಧನಸಹಾಯದ ಚೆಕ್ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ ರೈತರು ಯಾವುದೇ ಕಾರಣಕ್ಕೂ ಸಾಲಕ್ಕೆ ಹೆದರಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು. ಸಂಕಷ್ಟದಲ್ಲಿರುವ ರೈತರ ಬೆನ್ನಲುಬಾಗಿ ನಿಲ್ಲಲು ನಮ್ಮ ಹುಕ್ಕೇರಿ ಕುಟುಂಬ ಸದಾ ಸಿದ್ಧವಿದೆ ಎಂದು ಧೈರ್ಯ ತುಂಬಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲ ಪಾಟೀಲ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ ಅವರ ನಿರಂತರ ಪ್ರಯತ್ನದ ಫಲವಾಗಿ ಇಂದು ಸಂಕಷ್ಟದಲ್ಲಿರುವ ಮೂರೂ ರೈತ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಸರ್ಕಾರದ ಪರಿಹಾರ ತಲುಪಿದೆ. ರೈತರ ಹಿತ ಕಾಯುವ ಅವರ ಶ್ರಮಕ್ಕೆ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ,ಅಶೋಕ ಜಮದಾಡೆ,ಶಶಿಕಾಂತ ಪಾಟೀಲ, ಶರತ ಪಾಟೀಲ, ಮಲ್ಲು ಧನಗರ,ಮಾರುತಿ ಕಾಂಬಳೆ,ಚಂದ್ರಕಾಂತ ಸ್ವಾಮಿ,ಅಪ್ಪಾಸಾಹೇಬ ಪಾಟೀಲ, ಕಾಕಾಸಾಹೇಬ ಪಾಟೀಲ,ಸಂಜು ಪಿರಾಜೆ,ಅಜೀತ ಕಿಲ್ಲೆದಾರ,ಕಿತಲ ಯಳವಂತೆ,ಕುಮಾರ ಬಾಳಪ್ಪಾ ಪಿರಾಜೆ,ಶಂಭು ಪಿರಾಜೆ,ವಿನಾಯಕ ಮಾನೆ,ರಾಜು ಪಿರಾಜೆ,ರಾಜು ಮಾನೆ,ಶಂಕರ ಜೂಗುಳೆ,ರಾಮಜೀ ಯಳವಂತೆ,ಗಣಪತಿ ಮಾನೆ,ವಿಠ್ಠಲ ಕಾನಡೆ,ಜ್ಞಾನದೇವ ಪಿರಾಜೆ,ಮಹೇಶ ಪಿರಾಜೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
