ಗುರುವಿನ ಆಶಿರ್ವಾದ ಇದ್ದರೆ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಹೇಳಿದರು.


ಹುಕ್ಕೇರಿ ನಗರದಲ್ಲಿ ಗುರು ಪೂರ್ಣಿಮೆ ನಿಮಿತ್ತವಾಗಿ ಹಿರೇಮಠದ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಮಹಾ ಮಸ್ತಕಾಭೀಷೆಕ ಮಾಡುವ ಮೂಲಕ ಮಠದ ಶಿಷ್ಯರು ಗುರುವಿಗೆ ನಮನ ಸಲ್ಲಿಸಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಗುರುಗಳ ಪಾದ ಪೂಜೆ ನೆರವೇರಿಸಿ ಪಂಚಾಮೃತ ಅಭಿಷೇಕ ಮಾಡಿದರು.
ನಂತರ ವಿರಕ್ತ ಮಠಕ್ಕೆ ತೇರಳಿ ಶಿವ ಬಸವ ಮಹಾಸ್ವಾಮಿಗಳಿಗೆ ಸತ್ಕರಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ
ಶ್ರೀಗಳ ಆಶಿರ್ವಾದ ದಿಂದ ನಾನು ಶಾಸಕ ಸಚಿವನಾಗಿ ನಾಡಿನ ಸೇವೆ ಸಲ್ಲಿಸುವ ಅವಕಾಶ ಲಭಿಸಿದ್ದು ಕಾರಣ ಯಾವುದೇ ಒಬ್ಬ ವ್ಯಕ್ತಿ ಗುರಿ ಸಾಧಿಸಲು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಬೇಕಾದರೆ ಗುರುವಿನ ಆಶಿರ್ವಾದ ಬೇಕು ಎಂದರು
ನಂತರ ಶ್ರೀ ಮಠದ ಭಕ್ತರು ಪಂಚ ನದಿಗಳ ಜಲ ಮತ್ತು ಪಂಚಾಮೃತ ಮತ್ತು ಧನವಂತರಿ ಜಪದ ಜಲದಿಂದ ಚಂದ್ರಶೇಖರ ಶ್ರೀಗಳಿಗೆ ಅಭಿಷೇಕ ನೆರವೇರಿಸಿದರು.

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ಸಿದ್ದಾಂತ ಸಿಖಾಮನಿ ಮತ್ತು ಭಗವದ್ಗೀತೆ ಗಳು ಇಂದು ಪಠಣಗೊಂಡಿವೆ ದೇಶದಲ್ಲಿ ಎಲ್ಲರೂ ಒಂದೆ , ಎಲ್ಲ ಧರ್ಮದ ಗುರುವಿನ ಸಾರ ಒಂದೆ ಎಂಬ ವೇದವಾಖ್ಯ ಎಲ್ಲರಲ್ಲೂ ಮೂಡಲಿ ಎಂದರು.

ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಅದ್ಯಕ್ಷ ಸುಭಾಷ ನಾಯಿಕ, ಮುರಘೇಂದ್ರ ಪಾಟೀಲ, ಈರಣ್ಣಾ ಖೋತ, ಅಶೋಕ ಪಾಟೀಲ, ಸುರೇಶ ಜಿನರಾಳೆ, ಬಾಬುರಾವ ಮುನವಳ್ಳಿ, ಸಂಪತ್ತಕುಮಾರ ಶಾಸ್ತ್ರಿ ,ಉದಯ ಬ್ಯಾಳಿ, ಚನ್ನಪ್ಪಾ ಗಜಬರ, ಪ್ರಭಾಕರ ಸೂರ್ಯವಂಶಿ ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟ
ಇನ್ ನ್ಯೂಜ ಹುಕ್ಕೇರಿ.
