khanapur

*ಖಾನಾಪುರ: ‘ಪಂಚ ಗ್ಯಾರಂಟಿ’ ಸಭೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್!*

Share

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಪಂಚಾಯಿತಿ ಸಭಾಂಗಳದಲ್ಲಿ ನಡೆದ ‘ಪಂಚ ಗ್ಯಾರಂಟಿ’ ಯೋಜನೆಗಳ ಮಾಸಿಕ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ವಿದ್ಯುತ್ ವ್ಯತ್ಯಯ, ಗೃಹಲಕ್ಷ್ಮಿ ಯೋಜನೆಯಲ್ಲಿನ ಲೋಪ ಹಾಗೂ ಪಡಿತರ ವಿತರಣೆಯ ಗೊಂದಲಗಳ ಕುರಿತು ಚರ್ಚೆ ನಡೆದಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ತಕ್ಷಣವೇ ಇತ್ಯರ್ಥಪಡಿಸುವಂತೆ ಖಡಕ್ ಸೂಚನೆ ನೀಡಲಾಗಿದೆ.

 

ಸಭೆಯ ಅಧ್ಯಕ್ಷತೆ ವಹಿಸಿದ್ದ ಸೂರ್ಯಕಾಂತ ಕುಲಕರ್ಣಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೈತ್ರಿ ಅವರ ಸಮ್ಮುಖದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ತಾಲೂಕಿನಲ್ಲಿ ‘ಗೃಹಜ್ಯೋತಿ’ ನೊಂದಣಿ ಶೇ. ೯೮.೪೮ ರಷ್ಟು ತಲುಪಿದ್ದು, ಮನೆ-ಮನೆ ಪರಿಶೀಲನೆಗೆ ಸಹಕರಿಸುವಂತೆ ಹೆಸ್ಕಾಂ ಅಧಿಕಾರಿ ಪ್ರವೀಣ್ ಬರ್ಗಾಲೆ ಮನವಿ ಮಾಡಿದರು. ಆದರೆ, ನಂದಗಡ ಮತ್ತು ಪಶ್ಚಿಮ ಭಾಗದಲ್ಲಿ ನಿರಂತರ ವಿದ್ಯುತ್ ವ್ಯತ್ಯಯವಾಗುತ್ತಿರುವುದಕ್ಕೆ ಸದಸ್ಯ ಪ್ರಕಾಶ್ ಮಾದಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನಂದಗಡದ ಸೆಕ್ಷನ್ ಆಫೀಸರ್ ಬದಲಾವಣೆಗೆ ಆಗ್ರಹಿಸಿದರು. ಇನ್ನು, ಪಡಿತರ ಧಾನ್ಯ ವಿತರಣೆಯ ನಿಖರ ಮಾಹಿತಿ ನೀಡದ ಆಹಾರ ಇಲಾಖೆಯ ಅಧಿಕಾರಿಗಳಿಗೆ ಅಧ್ಯಕ್ಷರು ಕ್ಲಾಸ್ ತೆಗೆದುಕೊಂಡರು. ಸಿಡಿಪಿಒ ವಿಕ್ರಮ್ ಕೆ.ಬಿ ಮಾತನಾಡಿ, ಮೃತಪಟ್ಟ ೫೫೬ ಫಲಾನುಭವಿಗಳ ಖಾತೆಗೆ ‘ಗೃಹಲಕ್ಷ್ಮಿ’ ಹಣ ಜಮೆಯಾಗಿದ್ದು, ಅದನ್ನು ಬ್ಯಾಂಕ್‌ಗಳಿಂದ ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ, ಮಂಗಳವಾರದಿಂದ ಮಾಳಅಂಕಲೆ-ಈದಲ್‌ಹೊಂಡ ಮಾರ್ಗದಲ್ಲಿ ಹೊಸ ಬಸ್ ಸೇವೆ ಆರಂಭವಾಗಲಿದೆ ಎಂದು ಸಾರಿಗೆ ವ್ಯವಸ್ಥಾಪಕ ಸಂತೋಷ್ ಬೆನಕನಕೋಪ್ ಮಾಹಿತಿ ನೀಡಿದರು

Tags:

error: Content is protected !!