Uncategorized

**ಡಿಕೆಶಿ ಕ್ಯಾಬಿನೆಟ್ ರೇಸ್: ಲಕ್ಷ್ಮಣ್ ಸವದಿ, ಅಶೋಕ್ ಪಟ್ಟಣ ಹೆಸರು ಬಹುತೇಕ ಫೈನಲ್????!* **ಶೀಘ್ರದಲ್ಲೇ ಹೊರಬೀಳಲಿದೆ ನೂತನ ಸಚಿವರ ಫೈನಲ್ ಲಿಸ್ಟ್**

Share

ಡಿಕೆ ಶಿವಕುಮಾರ್ ಅವರ ನೂತನ ಸಂಪುಟ ಸೇರಲು ಕಾಂಗ್ರೆಸ್ ಶಾಸಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಸಚಿವ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಪ್ರಮುಖವಾಗಿ ಲಿಂಗಾಯತ ಸಮುದಾಯದ ಕೋಟಾದಡಿಯಲ್ಲಿ ಹಿರಿಯ ನಾಯಕರಾದ ಲಕ್ಷ್ಮಣ್ ಸವದಿ ಮತ್ತು ಅಶೋಕ್ ಪಟ್ಟಣ ಸಚಿವ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

 

ಲಿಂಗಾಯತ ಸಮುದಾಯದಿಂದ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕರ ನಡುವೆ ದೊಡ್ಡ ಮಟ್ಟದ ಪೈಪೋಟಿ ಶುರುವಾಗಿದೆ. ಈ ಪೈಪೋಟಿಯಲ್ಲಿ ಲಕ್ಷ್ಮಣ್ ಸವದಿ ಹಾಗೂ ಅಶೋಕ್ ಪಟ್ಟಣ ಅವರು ಲೀಡ್‌ನಲ್ಲಿದ್ದು, ಇವರೊಂದಿಗೆ ವಿಜಯಾನಂದ ಕಾಶಪ್ಪನವರ, ಬಸವರಾಜ ರಾಯರೆಡ್ಡಿ, ಹಂಪನಗೌಡ ಬಾದರ್ಲಿ, ಯಶವಂತ ರಾಯಗೌಡ ಮತ್ತು ಅಪ್ಪಾಜಿ ನಾಡಗೌಡ ಕೂಡ ರೇಸ್‌ನಲ್ಲಿದ್ದಾರೆ. ಈ ಪೈಕಿ ಮೂವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಇನ್ನು ಮುಸ್ಲಿಂ ನಾಯಕರ ಪೈಕಿ ರಿಜ್ವಾನ್ ಅರ್ಷದ್, ಜಮೀರ್ ಅಹಮದ್ ಖಾನ್, ತನ್ವೀರ್ ಸೇಠ್, ಸಲೀಂ ಅಹಮದ್ ಹಾಗೂ ಕನಿಜ್ ಫಾತಿಮಾ ಹೆಸರು ಮುಂಚೂಣಿಯಲ್ಲಿದ್ದು, ಮೂವರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ.

ಇನ್ನೊಂದೆಡೆ ಒಕ್ಕಲಿಗ ಸಮುದಾಯದಿಂದ ಶರತ್ ಬಚ್ಚೇಗೌಡ, ಮಾಗಡಿ ಬಾಲಕೃಷ್ಣ, ಗುಬ್ಬಿ ವಾಸು, ಶಿವಲಿಂಗೇಗೌಡ, ಚೆಲುವರಾಯಸ್ವಾಮಿ ಹಾಗೂ ಪ್ರಿಯಾಕೃಷ್ಣ ರೇಸ್‌ನಲ್ಲಿದ್ದು ಮೂವರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ. ಮಹಿಳಾ ಕೋಟಾದಡಿ ಆರತಿ ಕೃಷ್ಣ, ಲಕ್ಷ್ಮಿ ಹೆಬ್ಬಾಳ್ಕರ್, ಉಮಾಶ್ರೀ ಮತ್ತು ನಯನ ಮೊಟಮ್ಮ ಪೈಪೋಟಿಯಲ್ಲಿದ್ದು, ಇಬ್ಬರಿಗೆ ಅದೃಷ್ಟ ಒಲಿಯಬಹುದು. ಹಾಗೂ ಒಬಿಸಿ ವಿಭಾಗದಲ್ಲಿ ಅಜಯ್ ಸಿಂಗ್, ಶ್ರೀನಿವಾಸ್ ಮಾನೆ, ಸಂತೋಷ್ ಲಾಡ್ ಮತ್ತು ಮಂಕಾಳು ವೈದ್ಯ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಸದ್ಯದಲ್ಲೇ ಈ ಎಲ್ಲಾ ಗೊಂದಲಗಳಿಗೆ ತೆರೆಬಿದ್ದು ಅಧಿಕೃತ ಫೈನಲ್ ಲಿಸ್ಟ್ ಹೊರಬೀಳಲಿದೆ.

Tags:

error: Content is protected !!