ಪ್ರಸಕ್ತ ವರ್ಷದಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಅತ್ಯಲ್ಪ ಮಳೆಯಾಗಿದೆ ಇದರಿಂದ ಕಾಗವಾಡ ತಾಲೂಕಿನಲ್ಲಿ ಬರಪರಿಸ್ಥಿತಿ ಉಂಟಾಗಿದೆ ಇದರ ಬಗ್ಗೆ ಸರ್ಕಾರದ ಆದೇಶದಂತೆ ಸಮೀಕ್ಷೆ ಮಾಡುವುದು, ಹಾಗೂ ಕೊಂಕಣ ಶ್ರೀನಿಯಲ್ಲಿ ಸುರಿತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಮಹಾಪೂರ ಬಂದಾಗ ಪ್ರಕೃತಿ ವಿಕೋಪ ಯಾವ ರೀತಿ ಎದುರಿಸಬಹುದು ಈ ಬಗ್ಗೆ ಕಾಗವಾಡ ಶಾಸಕ ರಾಜು ಕಾಗೆ ಇವರ ಅಧ್ಯಕ್ಷತೆಯಲ್ಲಿ ತಾಲೂಕ ಆಡಳಿತ ಅಧಿಕಾರಿಗಳ ವಿಶೇಷ ಸಭೆ ಜರುಗಿತು.

ಮಂಗಳವಾರ ರಂದು ಕಾಗವಾಡದ ಪ್ರವಾಸಿ ಮಂದಿರದಲ್ಲಿ ತಹಶೀಲ್ದಾರ್ ರವೀಂದ್ರ ಹಾದಿಮನಿ ಹಾಗೂ ತಾಲೂಕ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರೇಂದ್ರ ವಾಲಿ ಇವರು ಉಳಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳೀಯ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳ ದೊಂದಿಗೆ ಚರ್ಚಿಸಿ ಸ್ಥಳೀಯ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿದರು.
ಕೃಷ್ಣಾ ನದಿಗೆ ಮಹಾಪೂರ ಬಂದಾಗ ನದಿ ತೀರದಲ್ಲಿರುವ ಮಂಗಾವತಿ, ಜುಗುಳ, ಶಹಾಪುರ್, ಮೊಳವಾಡ,
ಕೃಷ್ಣಾ -ಕಿತ್ತೂರು, ಕುಸನಾಳ ವನಿಜವಾಡ ಈ ಗ್ರಾಮಗಳಲ್ಲಿ ದೋಣಿಗಳ ವ್ಯವಸ್ಥೆ ಗಂಜಿ ಕೇಂದ್ರ ಪ್ರಾರಂಭಿಸಲು ಸಕಲಸಿದ್ಧತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನೆರವೇರಿತು.
ಕಳೆದ ಎರಡು ತಿಂಗಳುಗಳಿಂದ ಅತ್ಯಲ್ಪ ಮಳೆಯಾಗಿದ್ದರಿಂದ ಜನಜನವಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಚರ್ಚೆವಾಯಿತು
ಚರ್ಚೆಯಲ್ಲಿ ಚರ್ಚೆಯಲ್ಲಿ ಪಶು ಸಂಗೋಪನ ಇಲಾಖೆಯ ಅಧಿಕಾರಿ ಜಿ ಎಂ ಕಾಂಬಳೆ, ಕೃಷಿ ಇಲಾಖೆಯ ನಿಂಗಾನಾ ಬಿರಾದಾರ್,
ಕಾಂತಿನಾಥ್ ಬಿರಾದಾರ್, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನುಳಿದ ಇಲಾಖೆ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡು ವಿಶೇಷ ಮಾಹಿತಿ ನೀಡಿದರು.
