ತಾರಾಂಗಣ ಫೌಂಡೇಶನ್, ಜ್ಞಾನವರ್ಧಿನಿ ಕರಂಬಳ ಹೈಸ್ಕೂಲ್, ಪೂರ್ಣ ಪ್ರಾಥಮಿಕ ಮರಾಠಿ ಶಾಲೆ ಕರಂಬಳ ಹಾಗೂ ಕರಂಬಳ ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ ಕರಂಬಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.



ಈ ಶಿಬಿರವನ್ನು ಶಾಸಕ ವಿಠ್ಠಲ ಹಲಗೇಕರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಖಾನಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಸದಾನಂದ ಪಾಟೀಲ, ಪಿ. ಪಾಟೀಲ, ಕದಂ ಸರ್, ಹಸೂರ ಸರ್, ಮಹಾದೇವ ಘಾಡಿ, ಸದಾನಂದ ಮಾಸೇಕರ, ಅಮಿತ್ ಕುಂಡೇಕರ, ರಾಹುಲ್ ಅಳವಣಿ ಹಾಗೂ ಕರಂಬಳ ಮತ್ತು ಸುತ್ತಮುತ್ತಲ ಗ್ರಾಮಗಳ ಗಣ್ಯರು, ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


