Chikkodi

ಉತ್ತಮ ಮಳೆಗಾಗಿ,ಲೋಕಕಲ್ಯಾಣಕ್ಕಾಗಿ ಯಕ್ಸಂಬಾದ ಕರ್ಲಹೊಂಡಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ, ಹೋಮ ಹವನ

Share

:ತಾಲೂಕಿನ ಯಕ್ಸಂಬಾ ಪಟ್ಟಣದ ದೂಧಗಂಗಾ ನದಿಪಾತ್ರದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕರ್ಲಹೊoಡಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಉತ್ತಮ ಮಳೆಗಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಡಗರ-ಸಂಭ್ರಮದಿಂದ ಜರುಗಿದವು.

ಶ್ರೀ ಕರ್ಲಹೊಂಡಲಿಂಗೇಶ್ವರ ಸೇವಾ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಧಾರ್ಮಿಕ ಉತ್ಸವದಲ್ಲಿ ನಾಡಿನ ಏಳ್ಗೆ, ಉತ್ತಮ ಮಳೆ-ಬೆಳೆ ಹಾಗೂ ರೈತರ ಮತ್ತು ಸಮಸ್ತ ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಹೋಮ ಹವನ, ಮಹಾಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ದೇವಸ್ಥಾನದ ಆವರಣದಲ್ಲಿ ಕ್ಷೇತ್ರ ಸಂಪ್ರದಾಯದಂತೆ ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಒಟ್ಟು ೫೧ ದಂಪತಿಗಳು ಏಕಕಾಲದಲ್ಲಿ ಹೋಮ ಹವನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಕಲ್ಪ ನೆರವೇರಿಸಿದರು. ತದನಂತರ ಶ್ರೀ ಕರ್ಲಹೊಂಡಲಿಂಗೇಶ್ವರ ಸ್ವಾಮೀಜಿಯವರಿಗೆ ವಿಶೇಷ ಮಹಾಪೂಜೆ ಮತ್ತು ಮಹಾಮಂಗಳಾರತಿ ಜರುಗಿತು.ನೆರೆದಿದ್ದ ಸಹಸ್ರಾರು ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀ ಕರ್ಲಹೊಂಡಲಿಂಗೇಶ್ವರ ಸೇವಾ ಸಂಘದ ಅಧ್ಯಕ್ಷರಾದ ಆಶಿಶ್ ಹುಕ್ಕೇರಿ, ಪ್ರಮುಖರಾದ ಪುಂಡಲಿಕ್ ಹಿಟ್ನೆ, ಸುರೇಂದ್ರ ಕಬಾಡೆ, ರವಿ ಹಿಟನ್ನೇ, ಸಚಿನ ಮಾನೆ, ಕೆದಾರಿ ಗಿಡ್ಡ, ಬಾಬು ಬಾಕಳೆ, ಪುಂಡಲಿಕ ಸಾತ್ವರ, ಶಂಕರ ಮೇಕಲಕ್ಕಿ, ಸುಧಾಕರ ಮೊಪಗಾರ, ಮಲಕಾರಿ ಡವನೇ, ಗಂಗಾಧರ ಹಿರೇಮಠ, ಬಾಳು ಮಹಂತ ಗುರು ಹಿರೇಮಠ ಹಾಗೂ ಸಂಘದ ಕಾರ್ಯದರ್ಶಿ ರಮೇಶ ಕಮ್ಮಾರ ಸೇರಿದಂತೆ ಊರಿನ ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!