ಹುಕ್ಕೇರಿ ನಗರದ ಹಿಂದು ಮುಸ್ಲಿಂ ಬಾಂಧವರು ಕಳೆದ ಹತ್ತು ದಿನಗಳಿಂದ ಮೊಹರಂ ಆಚರಣೆಗೆ ಪ್ರಮುಖ ಸ್ಥಳಗಳಲ್ಲಿ ಪಂಜಾ,ಡೋಲಿ, ಪ್ರತಿಷ್ಠಾಪಿಸಿ ಸಾಮೂಹಿಕ ವಾಗಿ ಪೂಜೆ ಸಲ್ಲಿಸಿದರು ಒಂಬತ್ತನೆ ದಿನ ಕತ್ತಲ ರಾತ್ರಿಯಂದು ಮಿರಜ,ಗಜಬರವಾಡಿ,ಹುಕ್ಕೇರಿ ನಗರಗಳ ಅಟಲ್ ಭಾಷಾ , ಹಸೇನ ಹುಸೇನ, ಬೀಬಿ ಪಾತೀಮಾ ಪಾಂಜಾಗಳು ಒಬ್ಬರಿಗೊಬ್ಬರು ಭೇಟಿ ಯಾಗಿ ಅಲಾಬಲಾ ಪಡೆದು ಬೆಳಗಿನ ಜಾವ ಅಗ್ನಿ ಪ್ರವೇಶ ಮಾಡಿ ತಮ್ಮ ತಮ್ಮ ನಗರಗಳಿಗೆ ತೆರಳಿದವು .


ಸಾವಿರಾರು ಜನ ಹಿಂದು – ಮುಸ್ಲಿಂ ಯುವಕರು ತಾಷಾ ಬಾರಿಸುವ ಮೂಲಕ ಒಬ್ಬರಿಗೊಬ್ಬರು ಬಾರಕೊಲಿನಿಂದ ಬಡೆದುಕೊಂಡು ದೇಹ ದಂಡಿಸಿಕೊಂಡರು.
ನಂತರ ಹತ್ತನೆ ದಿನದ ಸಾಯಂಕಾಲ ಪಾಂಜಾಗಳು, ಡೋಲಿಗಳು ನದಿಗೆ ತೆರಳಿ ಹತ್ತು ದಿನದ ಮೊಹರಮ್ ಹಬ್ಬಕ್ಕೆ ಮಂಗಲ ಹಾಡಿದರು.
ಈ ಹಬ್ಬದಲ್ಲಿ ಸಿಹಿಯಾದ ಚೋಂಗೆ ಮಾಡುವ ಮೂಲಕ ನೈವೇದ್ಯವನ್ನು ದೇವರಿಗೆ ಅರ್ಪಿಸುತ್ತಾರೆ
ರಾಜು ಬಾಗಲಕೋಟ
ಇನ್ ನ್ಯೂ ಜ ಹುಕ್ಕೇರಿ.
