Hukkeri

ಮುಂಗಾರು ಮಳೆಗಾಗಿ ರೈತರ ಆತಂಕ; ವರುಣನ ಕೃಪೆಗಾಗಿ ನೇರಲಿ ಗ್ರಾಮಸ್ಥರಿಂದ ವಿಶಿಷ್ಟ ಜಲಾಭಿಷೇಕ!

Share

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆಯ ಕೊರತೆಯಿಂದ ಬೆಳೆಗಳು ಒಣಗುವ ಭೀತಿ ಎದುರಾಗಿದ್ದು, ಬರಗಾಲದ ಛಾಯೆ ಆವರಿಸಿದೆ.ಇದರ ನಡುವೆ ವರುಣ ದೇವನ ಕೃಪೆಗಾಗಿ ಬೆಳಗಾವಿ ಜಿಲ್ಲೆಯ ನೇರಲಿ ಗ್ರಾಮ ಗ್ರಾಮಸ್ಥರು ಶುಕ್ರವಾರ ವಿಶಿಷ್ಟ ಆಚರಣೆ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಹುಕ್ಕೇರಿ ತಾಲೂಕಿನ ನೇರಲಿ ಗ್ರಾಮದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ವಿಶೇಷ ಜಲಾಭಿಷೇಕ ನೆರವೇರಿಸಿದರು. ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ತುಂಬಿಸಿ, ದೇವರಿಗೆ ಅಭಿಷೇಕ ಮಾಡುವ ಮೂಲಕ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದರು.
ಮುಂಗಾರು ಮಳೆ ನಂಬಿ ರೈತರು ಈಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದು, ಮಳೆಯ ಕೊರತೆಯಿಂದ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಮಳೆ ಮುಂದುವರಿದು ಕೈಕೊಟ್ಟರೆ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗುವ ಸಾಧ್ಯತೆ ಇದೆ.
ನೀಲಕಂಠೇಶ್ವರ ದೇವರಿಗೆ ಜಲಾಭಿಷೇಕ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದ್ದು, ಇದೇ ನಂಬಿಕೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ವರುಣನ ಕೃಪೆಗೆ ಮೊರೆಯಿಟ್ಟಿದ್ದಾರೆ.

Tags:

error: Content is protected !!