Uncategorized

ಬೆಕ್ಕಿನಕೇರಿ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ ಆರಂಭ; ಚಿಣ್ಣರಿಗೆ ಅದ್ದೂರಿ ಸ್ವಾಗತ; ಶೈಕ್ಷಣಿಕ ಸಾಮಗ್ರಿಗಳ ವಿತರಣೆ

Share

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹೊಸ ಆಯಾಮ ಸಿಕ್ಕಿದೆ. ಬೆಳಗಾವಿ ತಾಲೂಕಿನ ಬೆಕ್ಕಿನಕೇರಿ ಸರ್ಕಾರಿ ಶಾಲೆಯಲ್ಲಿ ಇದೀಗ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಅತ್ಯಂತ ಸಂಭ್ರಮದಿಂದ ಪ್ರಾರಂಭಿಸಲಾಗಿದ್ದು, ಪುಟ್ಟ ಮಕ್ಕಳನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ.

ಬೆಕ್ಕಿನಕೇರಿಯ ಸರ್ಕಾರಿ ಪೂರ್ಣ ಪ್ರಾಥಮಿಕ ಶಾಲೆಯಲ್ಲಿ ನೂತನ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಪುಟ್ಟ ವಿದ್ಯಾರ್ಥಿಗಳಿಗೆ ದಪ್ತರ, ಪುಸ್ತಕ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಅತ್ಯಂತ ಉತ್ಸಾಹದ ವಾತಾವರಣದಲ್ಲಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗ್ರಾಮ ಪಂಚಾಯತ್ ಪಿಡಿಒ ಜಿ. ಬಿ. ಹುಬ್ಬಳಿಕರ್, ಎಸ್‌ಡಿಎಂಸಿ ಅಧ್ಯಕ್ಷ ಶ್ರೀ ಪ್ರಭಾಕರ್ ಫಡಕೆ, ಉಪಾಧ್ಯಕ್ಷೆ ಸೌ. ಸಂಧ್ಯಾ ಸಾವಂತ ಹಾಗೂ ಸದಸ್ಯರಾದ ವಿನೋದ್ ಭೋಗಣ್, ನಾಮದೇವ್ ಧಾಯಗೊಂಡೆ, ಚೇತನ್ ಭಾತ್ಕಾಂಡೆ, ಪರಶುರಾಮ್ ಭಾತ್ಕಾಂಡೆ ಮತ್ತು ಜ್ಞಾನೇಶ್ವರ್ ಧಾಯಗೊಂಡೆ ಅವರು ಮಾತನಾಡಿ, ವಿದ್ಯಾರ್ಥಿ, ಪಾಲಕರು, ಶಿಕ್ಷಕರು ಹಾಗೂ ಸಮಾಜ ಒಟ್ಟಾಗಿ ಶ್ರಮಿಸಿದರೆ ಪ್ರತಿ ಹಳ್ಳಿಯೂ ಜ್ಞಾನದ ಕೇಂದ್ರವಾಗಲಿದ್ದು, ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಜಂಟಿಯಾಗಿ ಕರೆ ನೀಡಿದರು. ಇದೇ ವೇಳೆ ವಿಶೇಷ ಮಾರ್ಗದರ್ಶನ ನೀಡಿದ ಎನ್. ಜಿ. ಪಾಟೀಲ್ ಅವರು ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಮನೆ ಮತ್ತು ಶಾಲೆಯ ನಡುವಿನ ಸಮನ್ವಯದ ಮಹತ್ವವನ್ನು ಒತ್ತಿಹೇಳಿದರು. ಶಾಲಾ ಮುಖ್ಯಾಧ್ಯಾಪಕಿ ತಹಶೀಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸುನಿತಾ ಜಾಧವ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಕೊನೆಯಲ್ಲಿ ಸುನಿತಾ ದುಂಡಗೇಕರ್ ಅವರು ನೆರೆದಿದ್ದ ಎಲ್ಲಾ ಶಿಕ್ಷಕರು, ಪಾಲಕರು ಹಾಗೂ ಗ್ರಾಮಸ್ಥರಿಗೆ ವಂದನೆ ಸಮರ್ಪಿಸಿದರು.

Tags:

error: Content is protected !!