Uncategorized

ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಎಸ್‌ಬಿ‌ಐ ಎಸ್ಸಿ/ಎಸ್ಟಿ ಸೇವಾ 13 ನೇ ತ್ರೈಮಾಸಿಕ ಸಭೆ….. 16ಸ್ಥಾನಕ್ಕೆ ಚುನಾವಣೆ, ಮತ ಚಲಾವಣೆ ಮಾಡಿದ ಸಂಘದ ಸದಸ್ಯರು.

Share

ಭಾರತೀಯ ಸ್ಟೇಟ್ ಬ್ಯಾಂಕ್‌ನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ 13ನೇ ತ್ರೈಮಾಸಿಕ ಸಭೆಯುವು, ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು. ಇದೇ ವೇಳೆ ಸಂಘದ 16 ಸ್ಥಾನಕ್ಕೆ ಚುನಾವಣೆ ಜರುಗಿದ್ದು, ಸಂಘದ ಸದಸ್ಯರೆಲ್ಲರು ತಮ್ಮ ಹಕ್ಕನ್ನು ಯಾವುದೇ ಗೊಂದಲವಿದೆ ಚಲಾವಣೆ ಮಾಡಿದರು. ‌

ನಗರದ ಗೋಕುಲ್ ರಸ್ತೆಯ ಏರ್ ಮುಂಭಾಗದ ಖಾಸಗಿ ಹಾಲ್‌ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ 13ನೇ ತ್ರೈಮಾಸಿಕ ಜರುಗಿದ್ದು, ಬೆಂಗಳೂರು ಎಸ್‌ಬಿಐ ಸರ್ಕಲನ ಮುಖಂಡರಾದ ಜೋಹಿ ಸ್ಮಿತಾ ಸಿನ್ಹಾ ಅವರು ಉದ್ಘಾಟಿಸಿದರು. ಅನೇಕ ಗಣ್ಯ ಮಾನ್ಯರು ಕಾರ್ಯಕ್ರಮದಲ್ಲಿ ಭಾಗವಿಸಿದ್ದು, ತ್ರೈಮಾಸಿಕ ಸಭೆಗೆ ಮುನ್ನ ಸಂಘಟನೆಯ ಜನರಲ್ ಬಾಡಿಗೆ ಚುನಾವಣೆ ಮತದಾನ ನಡೆಯಿತು. ಯಾವುದೇ ಅಹಿತಕರ ಘಡನೆ ನಡೆಯದಂತೆ ಸಂಘದ ಸದಸ್ಯರೆಲ್ಲರು ತಮ್ಮ ಮಲಾವಣೆ ಮಾಡುವ ಮೂಲಕ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿಸಿದ್ದರು. ಒಟ್ಟು 16 ಸ್ಥಾನಕ್ಕೆ ಮತದಾನ ನಡೆದಿದ್ದು, ಮತ ಏಣಿಕೆ ಕಾರ್ಯ ಸದ್ಯ ನಡೆಯುತ್ತಿದೆ. ಇದೇವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ SEWA(k), SBIOA( K) ಜನರಲ್ ಸೆಕ್ರೆಟರಿ ಕೆ ಎಲ್ ಚವ್ಹಾನ್, ಭಾರತೀಯ ಸ್ಟೇಟ್ ಬ್ಯಾಂಕ್ ಎಸ್ಸಿ, ಎಸ್ಟಿ ಪಂಗಡಗಳ ನೌಕರರ ಸಂಘವು ತನ್ನದೆಯಾದ ಇತಿಹಾಸವನ್ನು ಹೊಂದಿದೆ. ಇಂದು ಹುಬ್ಬಳ್ಳಿಯಲ್ಲಿ 13ನೇ ತ್ರೈಮಾಸಿಕ ಸಭೆಯು ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಇದರ ಜತೆಗೆ ಇಂದು ಸಂಘದ ಜನರಲ್ ಬಾಡಿ ಎಲೆಕ್ಷನ್ ಕೂಡಾ ಜರುಗಿದ್ದು, ಶಾಂತವಾಗಿ ಮತದಾನ ಪ್ರಕ್ರಿಯೆ ಆಗಿದೆ. ಸಂಘವು ಸಮಾಜ ಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಲೇ ಬಂದಿದೆ. ಸಮಜಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಜತೆಗೆ ಸಮುದಾಯದ ಜನರಿಗೆ ಯೋಜನೆಗನ್ನು ಮುಟ್ಟಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ. ಸಂಘದ ಒಳಗೆ ಮತ್ತಿ ಹೊರಗೆ ಸಮಾಜದಲ್ಲಿ ಸಂಘ ಸಮಾಜಿಕ ಕಾರ್ಯ ಮಾಡುತ್ತಿದೆ. ಇನ್ನಷ್ಟು ಸಮಾಜ ಮುಖಿ ಕಾರ್ಯಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದರು.

 

Tags:

error: Content is protected !!