Belagavi

ಶ್ರೀ ಗುರು ಅರ್ಜುನ್ ದೇವಜಿ ಶಹೀದಿ ದಿವಸ್: ಬೆಳಗಾವಿ ಗುರುದ್ವಾರದಲ್ಲಿ ಭಕ್ತರಿಂದ ವಿಶೇಷ ಸೇವೆ, ಲಂಗರ್ ಪ್ರಸಾದ ವಿತರಣೆ!

Share

ಬೆಳಗಾವಿಯ ಸಾಧ್ ಸಂಗತ್ ಗುರುದ್ವಾರ ಸಮಿತಿಯ ವತಿಯಿಂದ ಶ್ರೀ ಗುರು ಅರ್ಜುನ್ ದೇವಜಿ ಅವರ ಶಹೀದಿ ದಿವಸ್ ಅಂಗವಾಗಿ ವಿಶೇಷ ಸೇವೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇಂದು ಬೆಳಗಾವಿಯ ಸಾಧ್ ಸಂಗತ್ ಗುರುದ್ವಾರ ಸಮಿತಿಯ ವತಿಯಿಂದ ಶ್ರೀ ಗುರು ಅರ್ಜುನ್ ದೇವಜಿ ಅವರ ಶಹೀದಿ ದಿವಸ್ ಅಂಗವಾಗಿ ವಿಶೇಷ ಸೇವೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಧರ್ಮ ಮತ್ತು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಗುರುಗಳ ಸ್ಮರಣಾರ್ಥವಾಗಿ ಇಂದು ಗುರುದ್ವಾರದಲ್ಲಿ ಶಬ್ದ ಕೀರ್ತನೆ, ಗುರು ಕಾ ಲಂಗರ್ ಹಾಗೂ ಸಾರ್ವಜನಿಕರಿಗೆ ತಂಪು ಪಾನೀಯಗಳ (ಸಬೀಲ್) ವಿತರಣೆಯನ್ನು ಮಾಡಲಾಗುತ್ತಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿ ಸಿಖ್ ಮತ್ತು ಸಿಂಧಿ ಸಮುದಾಯದ ನೂರಾರು ಭಕ್ತರು ಪಾಲ್ಗೊಂಡು ಗುರುಗಳಿಗೆ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

Tags:

error: Content is protected !!