Vijaypura

ಬಿದ್ದಿದ್ದು ಬರೊಬ್ಬರಿ ಅರ್ಧ ಡಜನ್‌ ಹೆಣ; ಸಿಕ್ಕ ಆರೋಪಿಗಳು ಬರೊಬ್ಬರಿ ಒಂದು ಡಜನ್

Share

ವಿಜಯಪುರ ಜಿಲ್ಲೆಯಲ್ಲಿ ಜಮೀನು ವ್ಯಾಜ್ಯಕ್ಕೆ ಬರೊಬ್ಬರಿ ಬರೊಬ್ಬರಿ ಅರ್ಧ ಡಜನ್‌ ಹೆಣಬಿದ್ದಿದ್ದವು.ಜನ್‌ ಹೆಣಬಿದ್ದಿದ್ದವು. ಭೀಮಾತೀರದಲ್ಲಿ ನಡೆದ ಹತ್ಯಾಕಾಂಡವನ್ನ ಕಂಡು ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಚಡಚಣ ಪಟ್ಟಣದ ಪ್ರತಿಷ್ಟಿತ ನಿರಾಳೆ ಕುಟುಂಬ ಜನರನ್ನ ಅಟ್ಟಾಡಿಸಿ ಕೊಚ್ಚಿಹಾಕಿದ್ದ ಹಂತಕರು ಈಗ ಖಾಕಿ ಬಲೆಗೆ ಬಿದ್ದಿದ್ದಾರೆ. ಭಯಾನಕ ಸಾಮೂಹಿಕ ಹತ್ಯೆ ನಡೆಸಿ ಮಹಾರಾಷ್ಟ್ರ ಗಡಿಯಲ್ಲಿ ಅವಿತುಕೊಂಡಿದ್ದ ೧೨ ಹಂತಕರನ್ನ ಖಾಕಿ ಪಡೆ ಹೆಡೆಮುರಿ ಕಟ್ಟಿದೆ..

ಕಳೆದ ಮೇ ೨೯, ಅಂದು ವಿಜಯಪುರ ಜಿಲ್ಲೆಯ ಭೀಮಾತೀರ ರಕ್ತಸಿಕ್ತವಾಗಿತ್ತು. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ೬ ಜನರ ಸಾಮೂಹಿಕ ಹತ್ಯೆಯನ್ನ ಕಂಡು ಜನರು ಬೆಚ್ಚಿಬಿದ್ದಿದ್ದರು. ಭೀಮಾ ನದಿ ತೀರದಲ್ಲಿದ್ದ ೨೫ ಎಕರೆ ಜಮೀನು ವ್ಯಾಜ್ಯಕ್ಕೆ ಗೋವಿಂದಪುರ ಗ್ರಾಮದ ಗೊಳಗಿ ಕುಟುಂಬ ಚಡಚಣ ಪಟ್ಟಣದ ಪ್ರತಿಷ್ಟಿತ ನಿರಾಳೆ ಕುಟುಂಬದ ೫ ಜನ ಹಾಗೂ ಜೊತೆಯಲ್ಲಿದ್ದ ಓರ್ವ ವ್ಯಕ್ತಿ ಸೇರಿ ೬ ಜನರ ಸಾಮೂಹಿಕ ಹತ್ಯೆ ನಡೆಸಿತ್ತು. ಜಮೀನು ವ್ಯಾಜ್ಯದ ಬಗ್ಗೆ ರಾಜೀಸಂದಾನ ಮಾಡೊಣ ಎಂದು ಜಮೀನಿಗೆ ಕರೆದು ಕಣ್ಣಲ್ಲಿ ಕಾರದ ಪುಡಿ ಹಾಕಿ ೬ ಜನರನ್ನ ಡಬಲ್‌ ಬ್ಯಾರಲ್‌ ಗನ್‌ ಹಾಗೂ ಕತ್ತಿಗಳನ್ನ ಬಳಕೆ ಮಾಡಿ ಕೊಲ್ಲಲಾಗಿತ್ತು. ಬಳಿಕ ನೆರೆಯ ಮಹಾರಾಷ್ಟ್ರದ ಅಕ್ಕಲಕೋಟ, ಕುಡ್ಲಾ ಗ್ರಾಮ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಡಗಿಕೊಂಡಿದ್ದರು. ವಿಶೇಷ ೮ ತಂಡಗಳೊಂದಿಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ೧೨ ಆರೋಪಿಗಳನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ೨೦ಕ್ಕು ಅಧಿಕ ಜನರು ಭಾಗಿಯಾಗಿದ್ದು ಈ ಪೈಕಿ ಬಂಧನಕ್ಕೊಳಗಾದ ೧೨ ಜನರ ವಿಚಾರಣೆ ನಡೆಸಿ ಇಂದು ಇಂಡಿ ಪಟ್ಟಣದ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರು ಪಡೆಸಲಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಂಡಿ ಕೋರ್ಟ್‌ ಸುತ್ತ ಬಿಗಿ ಬಂದೋಬಸ್ತ ಕೈಗೊಳ್ಳಲಾಗಿತ್ತು.

ಇನ್ನೂ ಬಂಧಿತ ೧೨ ಆರೋಪಿಗಳಲ್ಲಿ ಮೂರು ಆರೋಪಿಗಳು ಹೆಸ್ರು ಈಗಾಗಲೇ ಎಫ್‌ ಐ ಆರ್‌ ನಲ್ಲಿದೆ. ಇನ್ನು ಉಳಿದಂತೆ ಹತ್ಯೆಗಾಗಿ ಪ್ಲಾನ್‌ ಮಾಡಿದ್ದ ಗೊಳಗಿ ಕುಟುಂಬದ ಅಪ್ಪುಗೌಡ ಪಾಟೀಲ್‌ ಊರ್ಫ್‌ ಗೊಳಗಿ, ಕಲ್ಲನಗೌಡ ಕಲಬುರ್ಗಿ ಜಿಲ್ಲೆಯ ಭೀಮಾತೀರದ ಸೊನ್ನ ಭಾಗದಿಂದ ತಮ್ಮ ಸಂಬಂಧಿಕ ಹುಡುಗರನ್ನ ಕರೆಯಿಸಿದ್ದರು ಎನ್ನಲಾಗಿದೆ. ಜಮೀನಿನಲ್ಲಿ ಮೊದಲೇ ಕಾರದ ಪುಡಿ, ತಲವಾರ್‌ ಇಟ್ಟುಕೊಂಡಿದ್ದರು. ವ್ಯಾಜ್ಯದ ಗಲಾಟೆ ವೇಳೆ ಮೊದಲಿಗೆ ಕಲ್ಲನಗೌಡನ ಲೈಸನ್ಸ್‌ ಡಬಲ್‌ ಬ್ಯಾರಲ್‌ ಗನ್‌ ನಿಂದ ಗುಂಡು ಹಾರಿಸಿ ನಿರಾಳೆ ಕುಟುಂಬದ ಚಂದ್ರಕಾಂತ ಮಕ್ಕಳಾದ ಸಮರ್ಥ ಹಾಗೂ ರಾಹುಲ್‌ನನ್ನ ಕೊಲ್ಲಲಾಗಿದೆ. ಬಳಿಕ ಉಳಿದವರು ಸೇರಿ ಇನ್ನೂಳಿದ ದುಂಡಪ್ಪ ನಿರಾಳೆ, ಶಿವಪುತ್ರ, ಚಂದ್ರಕಾಂತ ಹಾಗೂ ಶಬ್ಬಿರ್‌ ಅತ್ತಾರ್‌ ನನ್ನ ಕಬ್ಬು ಕತ್ತರಿಸೋ ಕತ್ತಿಗಳಿಂದ ಕೊಚ್ಚಿ ಕೊಂದು ಹಾಕಿದ್ದಾರೆ. ಇನ್ನು ಕೊಲೆಯಾದ ಚಂದ್ರಕಾಂತ ನಿರಾಳೆ ಹಾಗೂ ಹಂತಕ ಅಪ್ಪುಗೌಡ ಮೊದಲಿನಿಂದಲು ಆಪ್ತಸ್ನೇಹಿತರಾಗಿದ್ದರು. ಆದ್ರೆ ೨೫ ಎಕರೆ ಜಮೀನಿಗಾಗಿ ಅಪ್ಪುಗೌಡ ಆಪ್ತಮಿತ್ರ ಚಂದ್ರಕಾಂತ ಹಾಗೂ ಆತನ ಪರಿವಾರವನ್ನೆ ಕೊಂದು ಹಾಕಿರೋದು ದುರಂತ.

ಇನ್ನೂ ಈ ಪ್ರಕರಣದಲ್ಲಿ ನಿರಾಳೆ ಕುಟುಂಬಸ್ಥರು ೧೨ ಜನರ ಮೇಲೆ ದೂರು ನೀಡಿದ್ದರು ಸಹ, ಗೊಳಗಿ ಕುಟುಂಬ, ಸಂಬಂಧಿಕರ ಹುಡುಗರು ಸೇರಿ ೨೦ಕ್ಕು ಅಧಿಕ ಜನರು ಸೇರಿ ಸಾಮೂಹಿಕ ಹತ್ಯಾಕಾಂಡ ನಡೆಸಿರೋ ಅನುಮಾನಗಳಿವೆ. ಈ ನಿಟ್ಟಿನಲ್ಲಿ ತನಿಖೆ ಹಾಗೂ ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ..

Tags:

error: Content is protected !!