Hukkeri

ಹುಕ್ಕೇರಿ ನಗರದ ಹೃದಯ ಭಾಗದ ಮುಸ್ಲಿಂ ಸಂಸ್ಥೆಯ ಕಾರ್ಯ ಶ್ಲಾಘನೀಯ – ಡಿ ಡಿ ಪಿ ಯು ಭಂಡಾರೆ.

Share

ಟಿಪ್ಪು ಸುಲ್ತಾನ ಪದವಿ ಪೂರ್ವ ಮಹಾವಿದ್ಯಾಲಯವು ಹುಕ್ಕೇರಿ ನಗರದ ಹೃದಯಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವದರಿಂದ ವಿದ್ಯಾರ್ಥಿಗಳಿಗೆ ಅನಕೂಲ ವಾಗಿದೆ ಎಂದು ಚಿಕ್ಕೋಡಿ ಪದವಿ ಪೂರ್ವ ಮಹಾವಿದ್ಯಾಲಯ ಉಪ ನಿರ್ದೆಶಕ ಪಾಂಡುರಂಗ ಭಂಡಾರೆ ಹೇಳಿದರು.
ಹುಕ್ಕೇರಿ ನಗರದಲ್ಲಿ ಬೆಳಗಾವಿ ಜಿಲ್ಲಾ ಮುಸ್ಲಿಂ ಕಲ್ಯಾಣ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ನೂತನ ಇನಫಿನೀಟಿ ಇಂಟರ ನ್ಯಾಶನಲ್ ಶಾಲೆ ಮತ್ತು ಪದವಿ ಪೂರ್ವ ಸಾಯನ್ಸ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಚಿಕ್ಕೋಡಿ ಪದವಿಪೂರ್ವ ಉಪ ನಿರ್ದೆಶಕ ಪಂಡುರಂಗ ಭಂಡಾರೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.


ವೇದಿಕೆ ಮೇಲೆ ಡಿ ಎಂ ಡಬ್ಲು ಸೊಸೈಟಿ ಅದ್ಯಕ್ಷ ಇಕ್ಬಾಲ್ ಪೀರಜಾದೆ, ನ್ಯಾಯವಾದಿ ಪ್ರವೀಣ ಹಿರೇಮಠ, ಕಾರ್ಯದರ್ಶಿ ಶಾಹೀದ ಪೀರಜಾದೆ, ಬಿ ಇ ಓ ಪ್ರಭಾವತಿ ಪಾಟೀಲ ಉಪಸ್ಥಿತರಿದ್ದರು.
ನೂತನ ಶಾಲೆ ಮತ್ತು ಪಿ ಯು ಮಹಾವಿದ್ಯಾಲಯ ಕೊಠಡಿಗಳನ್ನು ಗಣ್ಯರು ರಿಬ್ಬನ್ ಕತ್ತರಿಸುವ ಮೂಲಕ ಲೋಕಾರ್ಪಣೆ ಮಾಡಿ ಮಾದ್ಯಮಗಳೊಂದಿಗೆ ಮಾತನಾಡಿದ ಉಪ ನಿರ್ದೆಶಕ ಪಾಂಡುರಂಗ ಭಂಡಾರೆ ಹುಕ್ಕೇರಿ ನಗರದ ಹೃದಯಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಸ್ಲಿಂ ಕಲ್ಯಾಣ ಸಂಸ್ಥೆಯು ಅಚ್ಚು ಕಟ್ಟಾದ ಕಟ್ಟಡ ನಿರ್ಮಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಕಾಮಧೇನು ವಾಗಿದೆ ಎಂದರು


ಸಂಸ್ಥೆಯ ಅದ್ಯಕ್ಷ ಇಕ್ಬಾಲ್ ಪೀರಜಾದೆ ಮಾತನಾಡಿ ಮುಸ್ಲಿಂ ಸಮಾಜದ ಶಿಕ್ಷಣ ಸಂಸ್ಥೆಗಳು ಬಹಳ ವಿರಳವಾಗುವೆ ಅದರಲ್ಲಿ ಹುಕ್ಕೇರಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸಂಸ್ಥೆಗೆ ನಮ್ಮ ಸ್ವಂತ ನಿವೇಶನ ನೀಡಿ ಕಟ್ಟಡ ನಿರ್ಮಿಸಲಾಗಿದೆ ಇದರ ಪ್ರಯೋಜನ ಈ ಭಾಗದ ವಿದ್ಯಾರ್ಥಿಗಳು ಪಡೆಯಬೇಕು ಎಂದರು
ನಂತರ ಸಂಸ್ಥೆ ವತಿಯಿಂದ ಗಣ್ಯರಿಗೆ ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಸತ್ಕರಿಸಿ ಅಭಿನಂದಿಸಲಾಯಿತು.


ಬಿ ಇ ಓ ಪ್ರಭಾವತಿ ಪಾಟೀಲ ಮಾತನಾಡಿ ಈ ಸಂಸ್ಥೆಯ ಅದ್ಯಕ್ಷರಾದ ಇಕ್ಬಾಲ್ ಪೀರಜಾದೆ ಯವರು ಸುಸಜ್ಜಿತ ಕಟ್ಟಡ ನಿರ್ಮಿಸಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿ ಅಭೂತಪೂರ್ವ ಕಾರ್ಯ ಮಾಡಿದ್ದಾರೆ ಅವರಿಗೆ ಇಲಾಖೆ ವತಿಯಿಂದ ಅಭಿನಂದನೆ ಹೇಳಿದರು
ಈ ಸಂದರ್ಭದಲ್ಲಿ ಆಲಂ ಶಾ ಮಕಾನದಾರ, ಲಾಜೀಮ ನಾಯಿಕವಾಡಿ, ಶಾಹಜನ ಬಡಗಾಂವಿ, ಇರ್ಷಾದ ಮೋಕಾಶಿ, ಡಿ ಆರ್ ಖಾಜಿ, ಸಲಿಂ ನದಾಫ್, ಜಾಹಾಂಗೀರ ಇನಾಂದಾರ, ಶ್ರೀಮತಿ ತಬಸಮಪಾಂಡುರಂಗಮೊದಲಾದವರು ಉಪಸ್ಥಿತರಿದ್ದರು

Tags:

error: Content is protected !!