ಹುಕ್ಕೇರಿ ತಾಲೂಕಿನ ಘಟಪ್ರಭಾ ನದಿಗೆ ಅಡ್ಡಲಾಗಿ ಬ್ರೀಜ ಕಂ ಬ್ಯಾರೇಜ ನಿರ್ಮಾಣದಿಂದ ಈ ಭಾಗದ ರೈತರಿಗೆ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಲಭಿಸುತ್ತದೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.


ಯಮಕನಮರ್ಡಿ ಕ್ಷೇತ್ರದ ನಾಗನೂರು ಕೆ ಎಂ ಹಾಗೂ ಸುತಗಟ್ಟಿ ಗ್೪ಅಮಗಳ ನಡುವೆ ಘಟಪ್ರಭಾ ನದಿಗೆ ಅಡ್ಡಲಾಗಿ ಸುಮಾರು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬ್ರೀಜ ಕಂ ಬ್ಯಾರೇಜ ನಿರ್ಮಾಣಕ್ಕೆ ಸಚೀವ ಸತೀಶ ಜಾರಕಿಹೋಳಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.


ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬ್ರೀಜ ಕಂ ಬಾಂದಾರದಿಂದಾಗಿ ಈ ಭಾಗದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿ 18೦ ಹೇಕ್ಟೆರ ಜಮಿನುಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ ಹಾಗೂ ಸುತಗಟ್ಟಿ ನಾಗನೂರು ಮಲ್ಲಟ್ಟಿ ಸಮಿಪದ 15 ಹಳ್ಳಿಗಳಿಗೆ ಸಂಪರ್ಕ ಲಭಿಸಲಿದೆ ಈ ಭಾಗದ ರೈತರ ಬೇಡಿಕೆಗೆ ಸ್೦ಂದಿಸಿ ಕಾಮಗಾರಿ ಕೈಗೋಳ್ಳಲಾಗಿದೆ ಎಂದರು

ಈ ಸಂದರ್ಭದಲ್ಲಿ ಬೆಳಗಾವಿ ಪೋಲಿಸ್ ಕಮಿಷನರ್ ಬೂರಸೆ, ಜಿಲ್ಲಾಧಿಕಾರಿ ಮಹಮ್ಮದ್ ರೋಷನ, ಸಿ ಇ ಓ ರಾವುಲ ಶಿಂದೆ ಹಾಗೂ ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಸಂಜಯ ಮಾಳಗೆ, ಶಿವಲೀಲಾ ಮಿಕ್ಕನ್ನವರ, ಮುಖಂಡರಾದ ಕಿರಣ ರಜಪೂತ ಉಪಸ್ಥಿತರಿದ್ದರು.
ಗುತ್ತಿಗೆದಾರ ಅಶೋಕ ಸಂಅಉಂದ್ದಿ ಸಚಿವರಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು ಮತ್ತು ಕಾಮಗಾರಿ ಕುರಿತು ಸಚಿವರಿಗೆ ವಿವರಣೆ ನೀಡಿದರು.
ನಂತರ ಗ್ರಾಮಸ್ಥರಿಂದ ಸಚಿವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಪೋಲಿಸ್ ಇನ್ಸಪೇಕ್ಟರ ಜಾವೀದ ಮುಷಾಪೀರ ಗ್ರಾಮಾ್ಥರು ಉಪಸ್ಥಿತರಿದ್ದರು.
