Dharwad

ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಾಥ್ ನೀಡಿದ ನವಲಗುಂದ ಶಾಸಕ ಕೊನರೆಡ್ಡಿ..

Share

ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಇಂದು ಮೂರನೇಯ ದುನಕ್ಕೆ ಕಾಲಿಟ್ಟಿದ್ದು, ಇಂದು ಧಾರವಾಡ ನವಲಗುಂದ ಶಾಸಕ ಎನ್ ಹೆಚ್ ಕೊನರೆಡ್ಡಿ ಸಾಥಗ ನೀಡಿದರು.‌ ಜತೆಗೆ ರಾಜ್ಯಪಾಲರಿಗೆ ಒತ್ತಡ ಹಾಕುವುದಾಗಿ ಭರವಸೆ ನೀಡಿದರು. ‌

ಧಾರವಾಡದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟದ ವೇದಿಕೆ ಭೇಟಿ ನೀಡಿದ‌ ಶಾಸಕ ಎನ್ ಹೆಚ್ ಕೊನರೆಡ್ಡಿಯವರು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಧಾರವಾಡ ಅಭಿವೃದ್ಧಿಗೆ ಪ್ರತ್ಯೇಕ ಪಾಲಿಕೆ ಬಹಳ ಅವಶ್ಯವಾಗಿದೆ‌. ಅನುದಾನ ಕೊರತೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಸಮಸ್ಯೆ ಸೇರಿ ಹಲವು ನಿರ್ಲಕ್ಷ್ಯ ಕಡಿವಾಣ ಹಾಕಲು ಪ್ರತ್ಯೇಕ ಪಾಲಿಕೆ ಧಾರವಾಡ ನಗರಕ್ಕೆ ಬೇಕೆ ಬೇಕು, ಪಕ್ಷಾತೀತವಾಗಿ ಇಲ್ಲಿ ಹೋರಾಟ ನಡೆಸುತ್ತಿರುವ ಸಂಘಟನೆ ಸೇರಿದಂತೆ ಸಂಸ್ಥೆ ಮುಖಂಡರೆಲ್ಲರ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಜತೆಗೆ ಇದರ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ, ಪ್ರತ್ಯೇಕ ಪಾಲಿಕೆ ಬೇಡಿಕೆ ಈಡೇರಿಕೆಗೆ ಆಗ್ರಹ ಮಾಡಲಾಗುವುದು ಎಂದು ಭರವಸೆ ನೀಡಿದರು. ‌

Tags:

error: Content is protected !!