BELAGAVI

ಬೆಳಗಾವಿ ಎಪಿಎಂಸಿ ಸಂಡೇ ಮಾರುಕಟ್ಟೆ ಗದ್ದಲ…

Share

ಬೆಳಗಾವಿ ಎಪಿಎಂಸಿ ಪ್ರಾಂಗಣದ ಸಂಡೇ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯವರಿಗೆ ಎಪಿಎಂಸಿ ಪ್ರಾಂಗಣದಲ್ಲಿಯೇ ಸಬ್ ಮಾರುಕಟ್ಟೆ ಸ್ಥಾಪನೆಗೆ ಮನವಿ ಸಲ್ಲಿಸಿದರೆ ಅದನ್ನು ಸರಕಾರದ ಗಮನಕ್ಕೆ ತರಲಾಗವುದು, ಇಲ್ಲದಿದ್ದರೇ ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆ ಹಂಚಿಕೆ ಮಾಡುವುದು ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸೋಮವಾರ ಬೆಳಗಾವಿ ‌ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಖಾಸಗಿ ಮಾರುಕಟ್ಟೆಯ ವ್ಯಾಪಾರಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ಖಾಸಗಿ ಮಾರುಕಟ್ಟೆಯವರು ಸಂಡೇ‌ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಮೂರು‌ ತಿಂಗಳುಗಳ ಕಾಲ ಸಮಯಾವಕಾಶ ಕೊಡಲಾಗಿತ್ತು. ಆದರೆ ನೀವು ಎಪಿಎಂಸಿ ಪ್ರಾಂಗಣದಲ್ಲಿರುವ ಮಳಿಗೆಗಳನ್ನು ಹಂಚಿಕೆ ಮಾಡುವಾಗ ಆಕ್ಷನ್ ಕರೆಯಲಾಗುವುದು.‌ ಆಗ ಮಳಿಗೆ ಪಡೆಯಿರಿ ಎಂದರು.
ಖಾಸಗಿ ಮಾರುಕಟ್ಟೆಯ ಅಬ್ದುಲ್ ಕರೀಮ್‌ಭಾಗವಾನ್ ಮಾತನಾಡಿ, ಖಾಸಗಿ ಮಾರುಕಟ್ಟೆಯ ಲೈಸನ್ಸ್ ಬಂದಾದಾಗಿನಿಂದ ನೂರಾರು ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಮಾರುಕಟ್ಟೆ ಲೈಸನ್ಸ್ ರದ್ದಾಗಿರುವುದನ್ನು‌ ನಿಷೇಧ ಮಾಡಬೇಕು ಎಂದು ಕಣ್ಣೀರು ಹಾಕಿ ಮನವಿ ಮಾಡಿದರು.

ಇದಕ್ಕೆ ಸತೀಶ್ ಜಾರಕಿಹೊಳಿ ಮಾತನಾಡಿ, ಕಾನೂನಿನಲ್ಲಿ ಏನು ಇದೆಯೋ ಅದನ್ನೇ ಮಾಡಲಾಗುವುದು.‌ಮೊದಲು ನಿಮ್ಮ‌ ಬೇಡಿಕೆಯನ್ನು ಇಡಿ ಬಳಿಕ ಸರಕಾರಕ್ಕೆ ಕಳುಹಿಸಲಾಗುವುದು ಎಂದರು.

ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹ್ಮಮದ್ ರೋಷನ್, ಜಿಪಂ ಸಿಇಓ ರಾಹುಲ್ ಶಿಂಧೆ, ಕಮಿಷ್ನರ್ ಭೂಷಣ್ ಬೊರಸೆ, ಖಾಸಗಿ ಮಾರುಕಟ್ಟೆ ವರ್ತಕರಾದ ಮೋಹನ ಮನ್ನೋಳ್ಕರ್, ಇಕ್ಬಾಲ್ ಡೋಣಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಇನ್ನು ಮುಝಮ್ಮಿಲ್ ಢೋಣಿ ಸೇರಿದಂತೆ ಇನ್ನುಳಿದವರು ಕಾನೂನಿನ ಚೌಕಟ್ಟಿನಲ್ಲಿ ಅನುಮತಿಯನ್ನು ನೀಡಿ, ಖಾಸಗಿ ಜೈ ಕಿಸಾನ್ ಮಾರುಕಟ್ಟೆಯನ್ನು ಆರಂಭಿಸಬೇಕು. ಇದರ ಮೇಲೆ ಅವಲಂಬಿತರಾದವರು ತೊಂದರೆಗೆ ಸಿಲುಕಿದ್ದಾರೆ. ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದರು.

ಇನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಮಹತ್ವದ ಚರ್ಚೆಯಾಗಿದೆ. ಎಪಿಎಂಸಿಯಲ್ಲಿ ಸುಮಾರು 70-80 ಮಳಿಗೆಗಳು ಖಾಲಿಯಿದ್ದು, ಮಳೆಯ ಮುನ್ನವೇ ಅದರಲ್ಲಿ ವ್ಯಾಪಾರ ವಹಿವಾಟು ಮಾಡಲಿ. ರೈತರಿಂದ ಯಾವುದೇ ದೂರುಗಳಿಲ್ಲ. ಆದರೇ, ಖಾಸಗಿ ಮಾರುಕಟ್ಟೆಯವರು ಉದ್ಧೇಶಪೂರ್ವಕವಾಗಿ ಸಂಡೇ ಮಾರುಕಟ್ಟೆಯನ್ನೇ ಅವಲಂಬಿತರಾಗಿದ್ದಾರೆ ಎಂದು ಎಪಿಎಂಸಿ ವ್ಯಾಪಾರಿಗಳು ಹೇಳಿದರು.

Tags:

error: Content is protected !!