ಧಾರವಾಡದಲ್ಲಿ ಪ್ರತ್ಯೇಕ ಪಾಲಿಕೆ ಆಗ್ರಹಿಸಿ ಧಾರವಾಡದಲ್ಲಿ ಧರಣಿ ಸತ್ಯಾಗ್ರಹ ಮೂರನೇಯ ದಿನಕ್ಕೆ ಕಾಲಿಟ್ಟಿದ್ದು, ಇಂದು ಜುಬ್ಲಿ ವೃತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಿ ಪ್ರಹ್ಲಾದ್ ಜೋಶಿ ಹಾಗೂ ಅರವಿಂದ ಬೆಲ್ಲದ ಭಾವಚಿತ್ರ ದಹಿಸಿ ಆಕ್ರೋಶ ಹೊರಹಾಕಲಾಯಿತು.


ನಗರದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಜುಬ್ಲಿ ವೃತಕ್ಕೆ ಆಗಮಿಸಿದ ಹೋರಾಟಗಾರರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ವಿಧಾನ ಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದರ ಭಾವಚಿತ್ರ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಇದೇ ವೇಳೆ ವೃತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತ್ಯೇಕ ಪಾಲಿಕೆ ವಿರೋಧಿಸುವವರ ವಿರುದ್ಧ ಧಿಕ್ಕಾರ ಕೂಗಿ ಅಸಮಧಾನ ಹೊರಹಾಕಿದರು. ಧಾರವಾಡ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಧಾರವಾಡ ಅಭಿವೃದ್ಧಿಗೆ ಪ್ರತ್ಯೇಕ ಪಾಲಿಕೆ ಅವಶ್ಯವಿದೆ. ಹಲವು ದಶಕಗಳಿಂದ ಈ ಕೂಗು ಇದೆ. ಈಗ ರಾಜ್ಯ ಸರ್ಕಾರ ಈ ಹೋರಾಟಕ್ಕೆ ಸ್ಪಂದಿಸಿ ಒಪ್ಪಿಕೊಂಡು ಪ್ರತ್ಯೇಕ ಪಾಲಿಕೆಗೆ ಕ್ರಮ ಕೈಗೊಂಡಿದೆ. ಆದರೆ ಅಂತಿಮವಾಗಿ ಪ್ರತ್ಯೇಕ ಪಾಲಿಕೆ ರಚನೆಗೆ ರಾಜ್ಯಪಾಲರ ಅಂಕಿತ ಹಂತದಲ್ಲಿದ್ದು, ಅಂಕಿತ ಹಾಕಲುರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ. ಇದು ಸರಿಯಾದ ನಡೆಯಲ್ಲ, ಈ ಕೂಡಲೇ ಪ್ರತ್ಯೇಕ ಪಾಲಿಕೆ ರಾಜ್ಯಪಾಲರು ಅಂಜಿತ ಹಾಕಬೇಕು, ವಿರೋಧ ಮಾಡುವವರು ವಿರೋಧಿಸುವುದನ್ನು ಬಿಟ್ಟು ಜನ ಕೂಗಿಗೆ ಕೈ ಜೋಡಿಸಬೇಕು ಇಲ್ಲವಾದಲ್ಲಿ ನಮ್ಮ ಹೋರಾಟ ಇನ್ನಷ್ಟು ತೀವ್ರಗೋಳ್ಳಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.


