
ಲಿಂಗಾಯತ ಸಂಘಟನೆ ಬೆಳಗಾವಿ ಆಶ್ರಯದಲ್ಲಿ ಕಳೆದ 15 ವರ್ಷಗಳಿಂದ ಸರಕಾರಿ ಶಾಲೆಯಲ್ಲಿ 10 ನೆ ತರಗತಿಗೆ ಹೋಗುವ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ಸಲಕರಣೆಗಳೊಂದಿಗೆ ಉತ್ತಮ ಶಿಕ್ಷಕರಿಂದ ಬಸವ ಜ್ಞಾನ ಕೆಂದ್ರ ಹೆಸರಿನಲ್ಲಿ ಉಚಿತ ಶಿಕ್ಷಣ ಕೊಡುತ್ತಿರುವೆವು
ಇಂದು ಡಾ. ಫ. ಗು, ಹಳಕಟ್ಟಿ ಭವನದಲ್ಲಿ ಬಡ ವಿದ್ಯಾರ್ಥಿಗಳಿಗೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಉತ್ತರ ಬೆಳಗಾವಿ ಶಾಸಕರಾದ ಮಾನ್ಯ ರಾಜು (ಆಸಿಫ್ ) ಸೇಠ್ ಅವರ ಮುಕಾಂತರ ಸ್ಕೂಲ್ ಬ್ಯಾಗ್, ಪುಸ್ತಕ, ಪೆನ, ಕೊಡಲಾಯಿತು


ಸಮಾರಂಭದಲ್ಲಿ ಅತಿಥಿಗಳಾಗಿ ಶಂಕರ ಕುಂದ್ರಾಳ, ಪ್ರವೀಣ್ ಹುಲಜಿ, ವಿದ್ಯಾ ಹುಂಡೇಕರ, ಸುರೇಶ ಖಿರಾಯಿ, ಪ್ರಸಾದ ಹಿರೇಮಠ, ವೀಣಾ ನಾಗಮೋತಿ, ರಾಜು ಪಾಟೀಲ, ಆಗಮಿಸಿದ್ದರು, ಪ್ರಾಸ್ತಾವಿಕವಾಗಿ, ಶಶಿಭೂಷಣ ಪಾಟೀಲ ಬಸವ ಜ್ಞಾನ ಕೆಂದ್ರ ನಡೆದು ಬಂದ ದಾರಿ, ಇಲ್ಲಿ ಕಲೆತ ವಿದ್ಯಾರ್ಥಿಗಳು ಮುಂದೆ ಉತ್ತಮ ಶಿಕ್ಷಣ ಪಡೆದು ತಮ್ಮ ಜೀವನ್ ರೂಪಿಸಿಕೊಂಡ ಬಗ್ಗೆ ಮಾತನಾಡಿದರು, ವಿದ್ಯಾರ್ಥಿಗಳನ್ನುದ್ದೇಸಿಶಿ ಶಾಸಕರಾದ ರಾಜು ಸೇಠ್ ಅವರು ಮಾತನಾಡುತ್ತ ಅವರ ಉಜ್ವಲ ಭವಿಷ್ಯಕ್ಕಾಗಿ ಹರಿಸಿದರು, ಸಂಘಟನೆ ಅಧ್ಯಕ್ಷರಾದ ಈರಣ್ಣಾ ದಯಣ್ಣವರ ಅಧ್ಯಕ್ಷೀಯ ಮಾತುಗಳನ್ನಾಡಿದರು, ಆನಂದ ಕರ್ಕಿ ನಿರೂಪಿಸಿದರು, ಶಿವಾನಂದ್ ನಾಯಿಕ ವಂದಿಸಿದರು


ಸಂಘಟನೆಯ ಎಲ್ಲ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಸವನ್ನು ಯಶಸ್ವೀಗೊಳಿಸಿದರು..

