BELAGAVI

ರಾಮತೀರ್ಥನಗರದಲ್ಲಿ ಸುರೇಶ ಯಾದವ ಪೌಂಡೇಶನ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ , ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಅಧ್ಯಕ್ಷ ಸುರೇಶ ಯಾದವ ಅವರು ಮಾತನಾಡಿ, ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅತ್ಯುತ್ತಮ ಕಾರ್ಯಕ್ರಮ. ಇದು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವುದಲ್ಲದೆ, ಇತರ ವಿದ್ಯಾರ್ಥಿಗಳಿಗೂ ಇದು ಸ್ಫೂರ್ತಿಯಾಗುತ್ತದೆ. ವಿದ್ಯಾರ್ಥಿಗಳಿಗಳು ಭವಿಷ್ಯದ ದಿನಗಳಲ್ಲಿ ತಾವು ಬಯಸಿದಂತೆ ಬದುಕಲು ಸ್ಪರ್ಧಾತ್ಮಕವಾಗಿ ಶಿಕ್ಷಣವನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದರು. ಪೌಂಡೇಶನ ವತಿಯಿಂದ ಪ್ರತಿ ವರ್ಷ ಉಚಿತ ಅರೋಗ್ಯ ಶಿಬಿರ, ರಕ್ತದಾನ, ಸಸಿನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಪೌಂಡೇಶನ ವತಿಯಿಂದ ಇನ್ನು ಅನೇಕ ಸಾಮಾಜಿಕ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದು ಸುರೇಶ ಯಾದವ ಹೇಳಿದರು. ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪ್ರಮೋದ್ ಜನತಾನಾಳ, ಆರೋಹಿ ಶೆಟ್ಟಿ, ಸೋಮನಾಥ ಕರವಿನವರ, ತುಳಸಿ, ಲಕ್ಸ್ಮಿ ಪಾವಟೆ, ರೋಹಿತ್ ಪೋಳ, ದರ್ಶನ್ ಪಮ್ಮಾರ, ಅಪ್ಪು ಲಮಾಣಿ, ಮಲ್ಲಿಕಾರ್ಜುನ್ ಜನರಾಳ ಸ್ವೀಕರಿಸಿದರು. ಈ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾರಂಜಿಮಠದ ಮ. ನಿ. ಪ್ರ. ಗುರುಸಿದ್ದಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮುಕ್ತಾರ ಪರನ, ಕೊರಿಶೆಟ್ಟಿ , ಊರಬೀನಟ್ಟಿ ನಿರೂಪಿಸಿ, ವಂದಿಸಿದರು.

Share

ರಾಮತೀರ್ಥನಗರದಲ್ಲಿ ಸುರೇಶ ಯಾದವ ಪೌಂಡೇಶನ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ , ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.

ಅಧ್ಯಕ್ಷ ಸುರೇಶ ಯಾದವ ಅವರು ಮಾತನಾಡಿ, ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅತ್ಯುತ್ತಮ ಕಾರ್ಯಕ್ರಮ. ಇದು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವುದಲ್ಲದೆ, ಇತರ ವಿದ್ಯಾರ್ಥಿಗಳಿಗೂ ಇದು ಸ್ಫೂರ್ತಿಯಾಗುತ್ತದೆ. ವಿದ್ಯಾರ್ಥಿಗಳಿಗಳು ಭವಿಷ್ಯದ ದಿನಗಳಲ್ಲಿ ತಾವು ಬಯಸಿದಂತೆ ಬದುಕಲು ಸ್ಪರ್ಧಾತ್ಮಕವಾಗಿ ಶಿಕ್ಷಣವನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದರು.

ಪೌಂಡೇಶನ ವತಿಯಿಂದ ಪ್ರತಿ ವರ್ಷ ಉಚಿತ ಅರೋಗ್ಯ ಶಿಬಿರ, ರಕ್ತದಾನ, ಸಸಿನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಈ ಪೌಂಡೇಶನ ವತಿಯಿಂದ ಇನ್ನು ಅನೇಕ ಸಾಮಾಜಿಕ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದು ಸುರೇಶ ಯಾದವ ಹೇಳಿದರು.

ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪ್ರಮೋದ್ ಜನತಾನಾಳ, ಆರೋಹಿ ಶೆಟ್ಟಿ, ಸೋಮನಾಥ ಕರವಿನವರ, ತುಳಸಿ, ಲಕ್ಸ್ಮಿ ಪಾವಟೆ, ರೋಹಿತ್ ಪೋಳ, ದರ್ಶನ್ ಪಮ್ಮಾರ, ಅಪ್ಪು ಲಮಾಣಿ, ಮಲ್ಲಿಕಾರ್ಜುನ್ ಜನರಾಳ ಸ್ವೀಕರಿಸಿದರು.

ಈ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾರಂಜಿಮಠದ ಮ. ನಿ. ಪ್ರ. ಗುರುಸಿದ್ದಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮುಕ್ತಾರ ಪರನ, ಕೊರಿಶೆಟ್ಟಿ , ಊರಬೀನಟ್ಟಿ ನಿರೂಪಿಸಿ, ವಂದಿಸಿದರು.

Tags:

error: Content is protected !!