ಜೂನ್ ನಲ್ಲಿ ಶಾಲೆ ಪ್ರಾರಂಭ ಆಗುತ್ತಿದ್ದಂತೆ ಎಲ್ಲರಿಗೂ ಶಾಲ್ ವಿತರಣೆ ಮಾಡುತ್ತೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾದ್ಯಮಗಳ ಜೊತೆಗೆ ಹಿಜಾಬ್ – ಕೇಸರಿ ಶಾಲದ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಕೇಸರಿ ಶಾಲ್ ಹಾಕಿಕೊಳ್ಳಲು ನಿಷೇಧ ಹೇರಲು ಇವರಿಗೆ ಯಾರು ಅಧಿಕಾರ ಕೊಟ್ಟರು ಎಂದು ಪ್ರಶ್ನಿಸಿದರು. ಕೇಸರಿ ಶಾಲ್ ಹಾಕೋದು ನಮ್ಮ ಹಕ್ಕು, ನಮ್ಮ ಧರ್ಮ ಇದೆ. ರಾಜ್ಯದ ಎಲ್ಲ ಹಿಂದೂಗಳಿಗೆ ಈ ಬಗ್ಗೆ ಕರೆ ಕೊಡುತ್ತೇನೆ, ಎಲ್ಲ ಪಾಲಕರು ಮಕ್ಕಳಿಗೆ ತಿಲಕ ಹಾಗೂ ಕೇಸರಿ ಶಾಲ್ ಹಾಕಿ ಶಾಲೆಗೆ ಕಳಿಸಿ ಎಂದು ಮನವಿ ಮಾಡಿದರು. ಇವರು ಹೇಗೆ ವಿರೋಧ ಮಾಡ್ತಾರೆ, ಹೇಗೆ ತಡಿತಾರೆ ನಾವು ನೋಡುತ್ತೇವೆ, ಇನ್ನು ಮುಂದೆ ಹಾಜರಾತಿ ವೇಳೆ ವಿದ್ಯಾರ್ಥಿಗಳು ಎಸ್ ಸರ್ ಅನ್ನೋ ಬದಲು ಜೈ ಶ್ರೀರಾಮ ಅನ್ನಬೇಕು, ಇನ್ಮೇಲೆ ಶಿಕ್ಷಕರಿಗೆ ನಮಸ್ಕಾರ ಮಾಡುವಾಗ ತಲೆ ಬಾಗಿ ಜೈ ಶ್ರೀರಾಮ ಎನ್ನಬೇಕು ಎಂದು ಯತ್ನಾಳ್ ಹೇಳಿದರು. ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನವರೇ ಬಿಜೆಪಿ ಸರಕಾರ ಇದ್ದಾಗ ಟ್ವಿಟ್ ಮಾಡಿದ್ರೂ, ತಮಿಳುನಾಡಲ್ಲಿ ಸಿಎಂ ಸ್ಟಾಲಿನ್ ಬೆಲೆ ಇಳಿಕೆ ಮಾಡಿದ್ದಾರೆ ಹಾಗೆ ರಾಜ್ಯದ ಬಿಜೆಪಿ ಸರಕಾರವೂ ಇಳಿಸಬೇಕು ಎಂದು ಟ್ವೀಟ್ ಮಾಡಿದ್ದರು, ಈಗ ಧಮ್ ಇದ್ರೆ ಇವರು ಕಡಿಮೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು. ಅಂತರಾಷ್ಟ್ರೀಯ ಯುದ್ಧ ನಡೆದಿದ್ದಕ್ಕೆ ಅನಿವಾರ್ಯ ವಾಗಿ ಬೆಲೆ ಏರಿಕೆ ಆಗಿದೆ. ಅದನ್ನ ನಾನು ಸಮರ್ಥನೆ ಮಾಡಿಕೊಳ್ತೆನೆ, ನಾನು ವ್ಯಯಕ್ತಿಕವಾಗಿ ವಾಹನದ ಬಳಕೆ ಕಡಿಮೆ ಮಾಡಿಕೊಳ್ಳುತ್ತೇನೆ.

ಸುಮ್ಮನೇ ವಿಜಯೇಂದ್ರನಂತೆ ನಾಟಕ ಮಾಡಲ್ಲಾ ಎಂದರು. ಎಲ್ಲಿವರೆಗೆ ಪ್ರಧಾನಮಂತ್ರಿಗಳು ಬಂಗಾರ ತಗೆದುಕೊಳ್ಳಬೇಡ ಅಂತಾರೆ ಅಲ್ಲಿವರೆಗೆ ಒಂದು ಗುಂಜಿ ಬಂಗಾರ ತಗೆದುಕೊಳ್ಳುವುದಿಲ್ಲಾ, ಸಿದ್ಧರಾಮಯ್ಯ ಗೆ ತಾಕತ್ತಿದ್ರೆ ಪೆಟ್ರೋಲ್, ಡಿಸೇಲ್ ನ 30% ಟ್ಯಾಕ್ಸ್ ನ್ನ 20% ಗೆ ಇಳಿಸಲಿ ಎಂದರು. ಮೊನ್ನೆ ಕರೆಂಟ್ ಬಿಲ್ ಏರಿಸಿದ್ದಾರೆ. ನೀವು ಯಾವುದಕ್ಕೆ ಕಡಿಮೆ ಮಾಡಿದ್ದಿರಿ ಹೇಳಿ ಎಂದು ಪ್ರಶ್ನಿಸಿದರು. ಕಾರಣ ಕಾಂಗ್ರೆಸ್ ನವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

