ಖಾನಾಪೂರ ತಾಲೂಕಿನ ಕಕ್ಕೇರಿ ಸಮೀಪದ ಹುಲಿಕೇರಿಯ ಇಂದಿರಮ್ಮನ ಕೆರೆಯಲ್ಲಿ ಸ್ನಾನ ಮಾಡಲು ಹೋಗಿದ್ದ ಬಾಲಕನೊಬ್ಬನ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಧಾರವಾಡ ತಾಲೂಕು ತಡಕೋಡ ಗ್ರಾಮದ ನಿವಾಸಿ ಗಣೇಶ ಕೇದಾರ್ಜಿ ಪೂಜಾರಿ (18) ಎಂಬಾತನೆ ಮೃತ ದುರ್ದೈವಿ. ಕಕ್ಕೇರಿಯ ಶ್ರೀ ಬಿಷ್ಟಾದೇವಿಯ ಜಾತ್ರೆಯ ಅಂಗವಾಗಿ ಸಮೀಪದ ಹುಲಿಕೇರಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು. ಹಬ್ಬದ್ ಪ್ರಯುಕ್ತ ಇವರು ಕುಟುಂಬ ಸಮೇತ ಕೆರೆಗೆ ಭೇಟಿ ನೀಡಿದ್ದರು. ಅತಿ ದೊಡ್ಡ ಕೆರೆಯಲ್ಲಿ ಗಣೇಶ ಈತನು ಈಜಲು ಹೋಗಿ ನೀರಿನ ಆಳ ಅರಿಯದೆ ಹೆದರಿ ಜೀವ ಕಳೆದುಕೊಂಡ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಳ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
