Khanapur

ಖಾನಾಪುರದ ಕಸಮಳಗಿ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ: 9 ದಿನಗಳ ಕಾಲ ವಿಶೇಷ ಮಹಾಪ್ರಸಾದ ವಿತರಣೆ

Share

ಖಾನಾಪುರ ತಾಲೂಕಿನ ಸುಕ್ಷೇತ್ರ ಕಸ ಮಳಗಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಮಹಾನವಮಿ ನವರಾತ್ರಿ ಅಂಗವಾಗಿ. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಕಳೆದ ಒಂಬತ್ತು ದಿನಗಳಿಂದ ದೇವಸ್ಥಾ ನದಲ್ಲಿ ದುರ್ಗಾ ಪುರಾಣ ಪ್ರವಚನ ಹಾಗೂ ಪ್ರತಿದಿನ ಮಹಾಪ್ರಸಾದವನ್ನು ಏರ್ಪಡಿಸಲಾಗಿತ್ತು.

ಮಹಾಪ್ರಸಾದ ಹಲವು ವಿಶೇಷತೆಗಳಿಂದ ಕೂಡಿದ್ದು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು 9 ದಿನಗಳ ಕಾಲ ಪ್ರತಿದಿನ ಹೋಳಿಗೆ ಹುಗ್ಗಿ. ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ಮಹಾಪ್ರಸಾದದಲ್ಲಿ ವಿತರಿಸಲಾಯಿತು ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮವನ್ನು ದೇವಸ್ಥಾನ ಕಮಿಟಿಯವರು ಹಾಗೂ ಗ್ರಾಮದ ದೇವಿಯ ಎಲ್ಲಾ ಭಕ್ತರು ಸೇರಿ ನಡೆಸುತ್ತಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕುರಿತು ದೇವಸ್ಥಾನ ಕಮಿಟಿಯ ಅಧ್ಯಕ್ಷ ಭೀಮಪ್ಪ ಬೋಕಡೆಕರ್ ಮಾತನಾಡಿ ಸುಕ್ಷೇತ್ರ ಕಸಮಳಗಿ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ ಇಲ್ಲಿಯ ಪ್ರತಿಯೊಂದು ದೇವಾಲಯಗಳಲ್ಲಿ ವರ್ಷವಿಡಿ ಕಾರ್ಯಕ್ರಮಗಳು ಜರುಗುತ್ತಿದ್ದು ಭಕ್ತರು ತನು ಮನ ಧನ ದಿಂದ ಭಾಗವಹಿಸಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿ ಗೊಳಿಸುತ್ತಿದ್ದಾರೆ ಹಾಗೂ ಇದರಿಂದ ಭಕ್ತರ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಿದೆ ಗ್ರಾಮದ ಜನರು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ನೆಮ್ಮದಿಯ ಜೀವನಕ್ಕೆ ದುರ್ಗಾ ಮಾತೆಯ ಅನುಗ್ರಹ ಅತ್ಯವಶ್ಯಕ ಎಂದರು ಈ. ನಿಟ್ಟಿನಲ್ಲಿ ಗ್ರಾಮದ ಎಲ್ಲಾ ಭಕ್ತರು ಸೇರಿ ಚಿಂತನೆ ನಡೆಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿದ್ದಾರೆ ಅವರಿಗೆ ತಾಯಿ ದುರ್ಗಾ ಮಾತೆ. ಸಕಲ ಸೌಭಾಗ್ಯಗಳನ್ನು ಕರುಣಿಸಿ ಆಶೀರ್ವದಿಸಲಿ ಎಂದರು ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಎಲ್ಲಾ ಸದಸ್ಯರು ಯುವಕರು ತಾಯಂದಿರು ಉಪಸ್ಥಿತರಿದ್ದರು ಗುಂಡೇನಟ್ಟಿಯ ಪೂಜ್ಯಶ್ರೀಗಳಾದ ಶ್ರೀಕಾಂತಯ್ಯ. ಹಿರೇಮಠ ಪ್ರವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರುಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅರವಿಂದ್ ಪಾಟೀಲ್ ಅವರಳ್ಳಿ ಬಿಳಕಿ ರುದ್ರಸ್ವಾಮಿ ಮಠದ ಪೂಜ್ಯಶ್ರೀ ಚನ್ನಬಸವ ದೇವರು ಭಾಗವಹಿಸಿದ್ದರು

Tags:

error: Content is protected !!