ಮಹಿಷಾಸುರನ ಸಂಹಾರ ಹಾಗೂ ದುಷ್ಟಶಕ್ತಿಗಳ ವಿರುದ್ಧದ ವಿಜಯದ ಸಂಕೇತವಾಗಿ ಆರಾಧಿಸಲ್ಪಡುವ ತಾಯಿ ತುಳಜಾಭವಾನಿಯ ಮಂಚಕಿ ನಿದ್ರೆ ಮತ್ತು ಶ್ರಮನಿದ್ರೆ ಸಂಪ್ರದಾಯ ಭಕ್ತರಲ್ಲಿ ವಿಶೇಷ ಮಹತ್ವ ಪಡೆದಿದೆ. ನವರಾತ್ರಿಗೂ ಮುನ್ನ ಒಂಬತ್ತು ದಿನಗಳ ಕಾಲ ಮಂಚದ ಮೇಲೆ ವಿಶ್ರಾಂತಿ ನೀಡುವ ಸಂಪ್ರದಾಯವಿದ್ದರೆ, ವಿಜಯದಶಮಿಯ ಸೀಮೋಲ್ಲಂಘನದ ಬಳಿಕ ಐದು ದಿನಗಳ ಕಾಲ ಶ್ರಮನಿದ್ರೆ ನೀಡಲಾಗುತ್ತದೆ. ಬಳಿಕ ಅಶ್ವಿನ ಪೂರ್ಣಿಮೆಯಂದು ತಾಯಿಯನ್ನು ವಿಧಿವತ್ತಾಗಿ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ. ಈ ಧಾರ್ಮಿಕ ವಿಧಿವಿಧಾನಗಳ ಮೂಲಕ ತಾಯಿಯ ಆರಾಧನೆ ಸಂಪ್ರದಾಯಬದ್ಧವಾಗಿ ನೆರವೇರುತ್ತದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್
ಇತ್ತ ತಾಯಿ ತುಳಜಾಭವಾನಿಯ ದರ್ಶನ ಪಡೆಯಲು ಭಕ್ತರು ಪಾದಯಾತ್ರೆಯ ಮೂಲಕ ತುಳಜಾಪುರದತ್ತ ಹೆಜ್ಜೆ ಹಾಕುತ್ತಿದ್ದಾರೆ. ತಾಯಿಯ ನಾಮಸ್ಮರಣೆ, ಭಜನೆ, ಜೈಕಾರಗಳೊಂದಿಗೆ ಸಾಗುವ ಭಕ್ತರ ಪಯಣ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದೆ. ತಾಯಿಯ ದರ್ಶನಕ್ಕಾಗಿ ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಿದ್ದು, ತುಳಜಾಪುರದಲ್ಲಿ ಧಾರ್ಮಿಕ ಸಂಭ್ರಮ ಮನೆಮಾಡಿದೆ. ತಾಯಿ ನಿದ್ರೆಯಿಂದ ಜಾಗೃತಳಾಗುವ ಪವಿತ್ರ ಕ್ಷಣದ ನಿರೀಕ್ಷೆ ಒಂದೆಡೆಯಾದರೆ, ತಾಯಿಯ ದರ್ಶನಕ್ಕಾಗಿ ಸಾಗುವ ಭಕ್ತರ ಪಾದಯಾತ್ರೆ ಮತ್ತೊಂದೆಡೆ ವಿಶೇಷ ಆಕರ್ಷಣೆಯಾಗಿದೆ.
ಇನ್ನೂ ನವರಾತ್ರಿಗೂ ಮುನ್ನ ಒಂಬತ್ತು ದಿನಗಳ ಕಾಲ ಮಂಚಕಿ ನಿದ್ರೆ, ವಿಜಯದಶಮಿಯ ಸೀಮೋಲ್ಲಂಘನದ ಬಳಿಕ ಐದು ದಿನಗಳ ಕಾಲ ಶ್ರಮನಿದ್ರೆ… ಹೀಗೆ ತಾಯಿ ತುಳಜಾಭವಾನಿಯ ಆರಾಧನೆಯಲ್ಲಿ ವಿಶಿಷ್ಟ ಧಾರ್ಮಿಕ ಸಂಪ್ರದಾಯಗಳು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿವೆ. ಮಂಚಕಿ ನಿದ್ರೆಯ ಸಂದರ್ಭದಲ್ಲಿ ತಾಯಿಯನ್ನು ಶಯನಗೃಹದಲ್ಲಿರುವ ಮಂಚದ ಮೇಲೆ ವಿಶ್ರಾಂತಿಗಾಗಿ ಇರಿಸಲಾಗುತ್ತದೆ. ಇನ್ನು ಸೀಮೋಲ್ಲಂಘನದ ಬಳಿಕ ಸಾಂಪ್ರದಾಯಿಕ ಮಂಚದ ಮೇಲೆ ಶ್ರಮನಿದ್ರೆ ನೀಡಲಾಗುತ್ತದೆ. ಅಶ್ವಿನ ಪೂರ್ಣಿಮೆಯಂದು ತಾಯಿಯನ್ನು ವಿಧಿವತ್ತಾಗಿ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸುವ ಮೂಲಕ ಧಾರ್ಮಿಕ ವಿಧಿವಿಧಾನಗಳು ಸಂಪನ್ನ ಗೊಳ್ಳುತ್ತವೆ. ಇದೀಗ ನಿದ್ರೆಯಿಂದ ಜಾಗೃತಳಾಗುವ ತಾಯಿಯ ದರ್ಶನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.
ಒಟ್ಟಾರೆ, ತಾಯಿಯ ದರ್ಶನಕ್ಕೆ ಭಕ್ತರ ಪಾದಯಾತ್ರೆ; ತುಳಜಾಪುರದತ್ತ ಭಕ್ತಿಯ ಹೆಜ್ಜೆಗಳು!
ಇನ್ನೊಂದೆಡೆ, ತಾಯಿ ತುಳಜಾಭವಾನಿಯ ದರ್ಶನ ಪಡೆಯುವ ಹಂಬಲದೊಂದಿಗೆ ಭಕ್ತರು ಪಾದಯಾತ್ರೆಯ ಮೂಲಕ ತುಳಜಾಪುರದತ್ತ ಹೆಜ್ಜೆ ಹಾಕುತ್ತಿದ್ದಾರೆ. ದಾರಿಯುದ್ದಕ್ಕೂ ತಾಯಿಯ ನಾಮಸ್ಮರಣೆ, ಭಜನೆ ಹಾಗೂ ಜೈಕಾರಗಳು ಮೊಳಗುತ್ತಿದ್ದು, ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ. ದೂರದ ಊರುಗಳಿಂದಲೂ ಭಕ್ತರು ಕಾಲ್ನಡಿಗೆಯಲ್ಲೇ ಆಗಮಿಸಿ ತಾಯಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ತಾಯಿಯ ನಿದ್ರೆಯಿಂದ ಜಾಗೃತಿಯ ಧಾರ್ಮಿಕ ಸಂಪ್ರದಾಯ ಒಂದೆಡೆಯಾದರೆ, ತಾಯಿಯ ದರ್ಶನಕ್ಕಾಗಿ ಸಾಗುತ್ತಿರುವ ಭಕ್ತರ ಪಾದಯಾತ್ರೆ ಮತ್ತೊಂದೆಡೆ ವಿಶೇಷ ಆಕರ್ಷಣೆಯಾಗಿದೆ. ಈ ಎಲ್ಲ ಸಂಭ್ರಮದ ಕ್ಷಣಗಳನ್ನು ನಿಮ್ಮ ಮುಂದೆ ತೆರೆದಿಡಲಿದೆ ಇನ್ ನ್ಯೂಜ್ ತಂಡದ ವಿಶೇಷ ವರದಿ. ಇನ್ನೂ ತಾಯಿ ತುಳಜಾಭವಾನಿಯ ವಿಶಿಷ್ಟ ನಿದ್ರಾ ಸಂಪ್ರದಾಯ, ಜಾಗೃತಿಯ ಧಾರ್ಮಿಕ ಕ್ಷಣಗಳು ಹಾಗೂ ಭಕ್ತರ ಪಾದಯಾತ್ರೆಯ ದೃಶ್ಯಾವಳಿಗಳ ಸಮಗ್ರ ವರದಿಯೊಂದಿಗೆ ನಿಮ್ಮ ಮುಂದೆ ಬರಲಿದೆ ಇನ್ ನ್ಯೂಜ್ ತಂಡ. ಹೆಚ್ಚಿನ ಮಾಹಿತಿಗಾಗಿ ವೀಕ್ಷಿಸುತ್ತಿರಿ ಇನ್ ನ್ಯೂಜ್.
ವಿಜಯಕುಮಾರ್ ಸಾರವಾಡ
ಇನ್ ನ್ಯೂಜ್
ವಿಜಯಪುರ.
