Belagavi

ಸಿಎಂ ಸಭೆ ಯಶಸ್ವಿ ಆಗಲಿಲ್ಲ ಅಂದ್ರೆ ಅಕ್ಟೋಬರ್ 27ರಂದು ಕರ್ನಾಟಕ ಬಂದ್

Share

ಕಬ್ಬಿಗೆ 1000 ಪ್ರೋತ್ಸಾಹ ಧನ, ಕಬ್ಬಿನ ತೂಕದಲ್ಲಿ ಮೋಸ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುವ ರೈತರು, ಕಾರ್ಖಾನೆ ಮಾಲೀಕರು ಜೊತೆಗೆ ನಡೆಸುವ ಸಭೆಯಲ್ಲಿ ಒತ್ತಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಒತ್ತಾಯಿಸಿದರು.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿ ಟನ್ ಕಬ್ಬಿಗೆ 5,500 ರೂ. ಘೋಷಣೆ ಮಾಡಬೇಕು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಅವರ ಸಂಘಟನೆಯಲ್ಲಿಯೂ ನಾವು ಇದ್ದೇವು. ಅವರ ಸಂಘಟನೆಯಲ್ಲಿದ್ದಾಗ ನಾವು ಸಹ ಅವರ ವಿಮಾನ ಪ್ರಯಾಣಕ್ಕೆ ಸಹಾಯ ಮಾಡಿದ್ದೇವೆ. ಅದರ ಬಗ್ಗೆ ಈಗ ಮಾತನಾಡುವುದು ಬೇಡ. ಈಗ ಇರುವುದು ರೈತರ ಕಬ್ಬಿನ ಬೆಂಬಲ ಬೆಲೆ ಕೊಡಿಸಬೇಕಿದೆ. ಅದಕ್ಕೆ ಹೋರಾಟ ನಡೆಸುತ್ತಿದ್ದೇವೆ ಎಂದರು.
ನಾನು, ಶಶಿಕಾಂತ ಗುರೂಜಿ ರಾಜಕೀಯ ಮಾಡುತ್ತಿಲ್ಲ. ತೂಕದಲ್ಲಿ ಮೋಸ ಮಾಡುತ್ತಿರುವುದು ದೊಡ್ಡ ಸಮಸ್ಯೆ ಇದೆ. ರಾಜ್ಯ ಸರಕಾರ ಇದಕ್ಕಾಗಿ 500 ಕೋಟಿ ರೂ. ಅನುದಾನ ತೆಗೆದಿಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಸ್ವಾಮಿನಾಥನ್ ವರದಿ ಜಾರಿಗೆ ಬಂದರೆ ರೈತರ ಎಲ್ಲ ಬೆಳೆಗಾರರಿಗೆ ಅನುಕೂಲವಾಗುತ್ತದೆ. ರೈತರ ಹೋರಾಟ ಪಕ್ಷಾತೀತವಾಗಿದೆ. ಕಬ್ಬಿನ ವಿಷಯದ ಬಗ್ಗೆ ನಾಡಿನ ರೈತರಿಗೆ ನ್ಯಾಯ ಕೊಡಿಸಬೇಕಾಗಿದೆ ಎಂದರು.

Tags:

error: Content is protected !!