Vijaypura

ದೇವರಹಿಪ್ಪರಗಿ ರಾವುತರಾಯರ ಕಾರ್ಣಿಕ ನುಡಿ; ರೈತರಿಗೆ ಮಳೆಯ ಅಭಯ!

Share

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಐತಿಹಾಸಿಕ ಶ್ರೀ ರಾವುತರಾಯ ಜಾತ್ರಾ ಮಹೋತ್ಸವ ಭಕ್ತಿಭಾವದಿಂದ ಜರುಗಿದ್ದು, ಈ ವೇಳೆ ನುಡಿಯಲಾದ ಕಾರ್ಣಿಕ ಭವಿಷ್ಯವಾಣಿ ರೈತರ ಗಮನ ಸೆಳೆದಿದೆ. “ಮಳೆ ಇಲ್ಲವೆಂದು ಕೊರಗಬೇಡಿ, ಮುತ್ತಿನ ಜಾಳಗಿ ಹಾಕಿ ಸರ್ವ ಮಳೆ ಕೊಡ್ತೀನಿ” ಎಂಬ ಕಾರ್ಣಿಕ ನುಡಿ ಮಳೆಯ ನಿರೀಕ್ಷೆಯಲ್ಲಿರುವ ರೈತರಲ್ಲಿ ಭರವಸೆ ಮೂಡಿಸಿದೆ.

“ಮಳೆ ಹೋದಂತೆ ಧೈರ್ಯ ಬಿಡಬೇಡಿ, ಒಂದು ಸರ್ವ ಕೊಟ್ಟು ಸಲಹುತ್ತೇನೆ” ಎಂಬ ಸಂದೇಶವೂ ಕೇಳಿಬಂದಿದೆ. ಇದೇ ವೇಳೆ, “ಜೋಡು ಬಾಂಬು ಬೀಳತಾವ, ಹುಷಾರ್” ಎಂದು ಯುದ್ಧದ ಭೀತಿಯ ಕುರಿತು ಎಚ್ಚರಿಕೆಯ ಮಾತುಗಳನ್ನೂ ನುಡಿಯಲಾಗಿದೆ. “ವಕ್ಕಲಿಗರಿಗೆ ಬಾಳ ಕಷ್ಟ ಬಂತು, ಎಷ್ಟೇ ಕಷ್ಟ ಬಂದರೂ ಕೈ ಹಿಡಿದು ಕಾಪಾಡ್ತೀನಿ” ಎಂಬ ಕಾರ್ಣಿಕ ನುಡಿ ಕೃಷಿ ಸಂಕಷ್ಟದ ಬಗ್ಗೆಯೂ ಗಮನ ಸೆಳೆದಿದೆ. ವಿಜಯದಶಮಿ ಬಳಿಕ ದ್ವಾದಶಿಯಿಂದ ಆರಂಭವಾಗುವ ಐದು ದಿನಗಳ ಈ ಐತಿಹಾಸಿಕ ಜಾತ್ರೆಯಲ್ಲಿ ರಥೋತ್ಸವದ ಬದಲಾಗಿ ತೆರೆದ ಬಂಡಿಯಲ್ಲಿ ಅಶ್ವಾರೂಢನಾಗಿ ರಾವುತರಾಯನ ಮೆರವಣಿಗೆ ನಡೆಯುವುದು ವಿಶೇಷ. ಸಾವಿರಾರು ಭಕ್ತರು ಭಾಗವಹಿಸಿ ದೇವರಿಗೆ ಭಂಡಾರ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಈ ಜಾತ್ರೆಯಲ್ಲಿ ಶ್ರೀ ರಾವುತರಾಯ ಮತ್ತು ಗಂಗೆಮಾಳಮ್ಮರ ವಿವಾಹ ಸಮಾರಂಭವೂ ಸಂಪ್ರದಾಯದಂತೆ ನಡೆಯುತ್ತದೆ.

Tags:

error: Content is protected !!