Vijaypura

ಕಬ್ಬಿನ ದರ ನಿಗದಿಗೂ ಮುನ್ನ ಕಬ್ಬು ಸಾಗಾಟಕ್ಕೆ ರೈತರ ವಿರೋಧ; ತಿಡಗುಂದಿ ಟೋಲ್ ಬಳಿ ಟ್ರ್ಯಾಕ್ಟರ್ ತಡೆ

Share

ಪ್ರಸಕ್ತ ಸಾಲಿನ ಕಬ್ಬಿನ ಬೆಲೆ ನಿಗದಿಯಾಗುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬಾರದು ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ, ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ್ನು ತಿಡಗುಂದಿ ಟೋಲ್ ಬಳಿ ರೈತರು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಟ್ಟದಲ್ಲಿ ಕಬ್ಬಿನ ದರ ನಿಗದಿ ಕುರಿತು ಸಭೆ ನಡೆಸಿ ಬೆಲೆ ಘೋಷಿಸುವವರೆಗೆ ಕಾರ್ಖಾನೆಗಳನ್ನು ಪ್ರಾರಂಭಿಸ ಬಾರದು ಎಂಬ ಸಂದೇಶವಿದ್ದರೂ, ಕನ್ನೂರು ಭಾಗದವರು ಕಬ್ಬು ಕಡಿದು ಮಹಾರಾಷ್ಟ್ರಕ್ಕೆ ಸಾಗಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ್ನು ತಿಡಗುಂದಿ ಟೋಲ್ ಬಳಿ ತಡೆದ ರೈತರು, ದರ ನಿಗದಿಯಾಗುವವರೆಗೆ ಕಬ್ಬು ಸಾಗಿಸದಂತೆ ಎಚ್ಚರಿಕೆ ನೀಡಿದರು. ಈ ವೇಳೆ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಕಬ್ಬು ಸಾಗಿಸುತ್ತಿದ್ದವರು ಟ್ರ್ಯಾಕ್ಟರ್ ಸಮೇತ ಮರಳಿ ತಮ್ಮ ಹೊಲದತ್ತ ತೆರಳಿದರು.

Tags:

error: Content is protected !!