Bagalkote

ನನ್ನ ಪತಿಯನ್ನು ಆನಂದ ಮತ್ತು ಬಸವಂತ ನ್ಯಾಮಗೌಡ ಅಪಹರಿಸಿದ್ದಾರೆ…

Share

ಜಮಖಂಡಿ ಶುಗರ್ಸ್‌ ‘ನಲ್ಲಿ ನುಗ್ಗಿದ ಸುಮಾರು 200ಕ್ಕೂ ಅಧಿಕ ಜನರ ಗುಂಪು ಅಕೌಂಟೆಂಟ್ ರಜನೀಶ್ ವರ್ಮಾನ ಮೇಲೆ ಹಲ್ಲೆ ನಡೆಸಿ ಅಪಹರಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಜಮಖಂಡಿ ಶುಗರ್ಸ್‌ ಕಾರ್ಖಾನೆಯಲ್ಲಿ ಭಾರೀ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಕೌಂಟೆಂಟ್ ರಜನೀಶ್ ವರ್ಮಾ ಅವರ ಪತ್ನಿ ಮಾಜಿ ಅಧ್ಯಕ್ಷ ಆನಂದ ನ್ಯಾಮಗೌಡ ಹಾಗೂ ಬಸವಂತ ನ್ಯಾಮಗೌಡರ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಸಕ್ಕರೆ ಮಾರಾಟದಲ್ಲಿ ಅಕ್ರಮ ಮತ್ತು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪು ಮಾಡದ ತನ್ನ ಪತಿಯ ಮೇಲೆ ಸುಮಾರು 200 ಜನರ ಗುಂಪು ಏಕಾಏಕಿ ದಾಳಿ ನಡೆಸಿ, ಕಚೇರಿಯನ್ನು ಧ್ವಂಸಗೊಳಿಸಿ ಬಲವಂತವಾಗಿ ಅಪಹರಿಸಿದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ. ಈ ಅಮಾನವೀಯ ಕೃತ್ಯಕ್ಕೆ ನೇರವಾಗಿ ಆನಂದ ಮತ್ತು ಬಸವಂತ ನ್ಯಾಮಗೌಡರೇ ಸಂಪೂರ್ಣ ಹೊಣೆಗಾರರಾಗಿದ್ದು, ರಜನೀಶ್ ವರ್ಮಾ ಅವರಿಗೆ ಏನಾದರೂ ಹಾನಿಯಾದರೆ ಅವರೇ ನೇರ ಜವಾಬ್ದಾರರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

error: Content is protected !!