Nandagad

ನಂದಗಡ ಗ್ರಾಮ ಪಂಚಾಯಿತಿಯಲ್ಲಿ ಅರ್ಥಪೂರ್ಣ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

Share

ಖಾನಾಪುರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮ ಪಂಚಾಯಿತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದಮ್ ಅಲಿ ಜಲಗೇರಿ ಅವರು ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ತತ್ವಾದರ್ಶಗಳನ್ನು ಸ್ಮರಿಸಿದರು.

ನಂದಗಡ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಿಡಿಒ ಆದಮ್ ಅಲಿ ಜಲಗೇರಿ ಮಾತನಾಡಿ, ದೇಶದ ಮಹಾನ್ ಕಾವ್ಯ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ಮೂಲ ಹೆಸರು ರತ್ನಾಕರ ಎಂದಾಗಿದ್ದು, ಕಾಲಘಟ್ಟದ ಅನುಭವಗಳಿಂದ ಪ್ರಭಾವಿತರಾಗಿ ಜ್ಞಾನದ ಹಾದಿ ಹಿಡಿದರು ಎಂದು ಸ್ಮರಿಸಿದರು. ಪ್ರತಿಯೊಬ್ಬರೂ ವಾಲ್ಮೀಕಿಯವರ ಸತ್ಯ ಹಾಗೂ ಜ್ಞಾನದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು, ಮಹರ್ಷಿಗಳ ಸುದೀರ್ಘ ಜೀವನ ಚರಿತ್ರೆಯನ್ನು ಸಿಬ್ಬಂದಿಗೆ ವಿವರವಾಗಿ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಸಂತೋಷ್ ಕೊಪ್ಪದಮಠ, ಮಂಜುನಾಥ ಜಕನೆ, ಶ್ರೀಧರ್ ನಂದಗಡಕರ, ಮಹೇಶ್ ಮಾದಾರ, ಗಣಾಚಾರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:

error: Content is protected !!