ಸೇವಾ ಸಂಕಲ್ಪ ಎಂಬುದು ಇದು ಬಿಜೆಪಿ ಪಕ್ಷದ ಕಾರ್ಯಕ್ರಮ ಮಾತ್ರ ಅಲ್ಲ ಇದು ಇಡೀ ದೇಶದ ಜನರ ಕಾರ್ಯಕ್ರಮವಾಗಿದೆ. ಹೀಗಾಗಿ ಈ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಗ್ರಾಮಮಟ್ಟದಲ್ಲಿ ಹಲವಾರು ರೂಪದಲ್ಲಿ ಸೇವೆ ಮಾಡುವುದು ಸೇವಾ ಸಂಕಲ್ಪ ಆಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಸದಸ್ಯರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ನಂದಗಡ ಗ್ರಾಮದಲ್ಲಿರುವ ಬಸ್ಸಪ್ಪನ್ನ ಅರಗಾವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಂತಹ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಪ್ರತಿಯೊಬ್ಬ ನಾಗರಿಕನು ತಮ್ಮ ತಮ್ಮ ಗ್ರಾಮಗಳಲ್ಲಿ ಸಸಿ ನೆಡುವುದು, ಅಂಗನವಾಡಿ ಮಕ್ಕಳಿಗೆ ಮಿಲನ ಕಾರ್ಯಕ್ರಮ ಮಾಡುವುದು, ಬಡವರು ಕಷ್ಟದಲ್ಲಿದ್ದಾಗ ಅವರ ಸಹಾಯಕ್ಕೆ ನೀಲ್ಲುವುದು, ಅನ್ಯಾಯ ಕೊಳಗಾದವರಿಗೆ ನ್ಯಾಯ ದೊರಕಿಸಿ ಕೊಡುವುದು ಸೇವೆ ಮಾಡುವುದು ಸೇವಾ ಸಂಕಲ್ಪವಾಗಿದೆ. ಹೀಗೆ ತಾವೆಲ್ಲರೂ ನಿಜ ಬಗೆಯ ಸಮಾಜದಲ್ಲಿ ಸೇವೆ ಮಾಡುವುದರ ಮೂಲಕ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಹಾಗೂ ಬಿಡಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ಅವರು ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ನಂತರ ಈ ದೇಶಕ್ಕೆ ಸುವರ್ಣ ಯುಗ ಆರಂಭವಾಗಿದೆ. ಹೀಗಾಗಿ ಈ ದೇಶದ ನೆಚ್ಚಿನ ಪ್ರಧಾನಿಗಳು ದೇಶಕ್ಕೆ ಯಾವುದೇ ಯೋಜನೆಯನ್ನು ಘೋಷಿಸಬೇಕಾದರೆ ಅದು ಪ್ರತಿಯೊಬ್ಬ ನಾಗರಿಕರಿಗೂ ತಲುಪಬೇಕು ಅಂತಹ ಯೋಜನೆಯನ್ನು ಸಾರ್ವಜನಿಕ ಮಟ್ಟದಲ್ಲಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆಂದರು. ಇದರ ಜೊತೆಯಾಗಿ ನರೇಂದ್ರ ಮೋದಿಯವರ ಜನಪರ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಮನದಲ್ಲಿಟ್ಟುಕೊಂಡು ಅವರನ್ನು ಮುಂಬರುವ ಅವಧಿಯಲ್ಲಿ ಮತ್ತೊಂದು ಸಾರಿ ಆಶೀರ್ವದಿಸುವ ಕೆಲಸ ಮಾಡಬೇಕೆಂದರು.
ತದನಂತರದಲ್ಲಿ ಸಂಸದರು ಮತ್ತು ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ಸಸ್ಸಿ ನೆಟ್ಟು ನೀರು ಹಾಕಿ ಪರಿಸರಮಯ ವಾತಾವರಣ ನಿರ್ಮಿಸುವ ಸಂದೇಶ ನೀಡಿದರು ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕರಿಸಿದರು
ಈ ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕರು ಹಾಗೂ ಬಿಡಿಸಿಸಿ ನಿರ್ದೇಶಕರು ಅರವಿಂದ ಪಾಟೀಲ, ತಾಲೂಕಾ ಮಾರ್ಕೆಟಿಂಗ್ ಸೂಸೈಟಿಯ ನಿರ್ದೇಶಕ ರಫೀಕ್ ಹಲಶೀಕರ ಸೇರಿದಂತೆ ಪದಾಧಿಕಾರಿಗಳು ಬಿಜೆಪಿ ಬ್ಲಾಕ್ ಮಂಡಲದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
