Nandagad

ನಂದಗಡ: ಅದ್ದೂರಿಯಾಗಿ ಜರುಗಿದ ಶ್ರೀ ದುರ್ಗಾ ಮಾತಾ ದೌಡ್

Share

ಖಾನಾಪುರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದಲ್ಲಿ ಶಿವ ಪ್ರತಿಷ್ಠಾನ ಹಿಂದೂಸ್ಥಾನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ದುರ್ಗಾ ಮಾತಾ ದೌಡ್‌ಗೆ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಮಠಗಲ್ಲಿಯಿಂದ ಅದ್ದೂರಿಯಾಗಿ ಚಾಲನೆ ನೀಡಿದರು. ದುರ್ಗಾಮಾತೆಗೆ ಮಹಾಮಂಗಳಾರತಿ ಹಾಗೂ ಪ್ರೇರಣಾ ಮಂತ್ರದೊಂದಿಗೆ ನಡೆದ ಈ ಧಾರ್ಮಿಕ ಮೆರವಣಿಗೆಯಲ್ಲಿ ನೂರಾರು ಯುವಕ-ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು.

ಐತಿಹಾಸಿಕ ಹಿನ್ನೆಲೆಯುಳ್ಳ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಶಿವ ಪ್ರತಿಷ್ಠಾನ ಹಿಂದೂಸ್ಥಾನ ಶ್ರೀ ದುರ್ಗಾ ಮಾತಾ ದೌಡ್ ಅತ್ಯಂತ ಸಂಭ್ರಮ ಹಾಗೂ ಧಾರ್ಮಿಕ ಶ್ರದ್ಧೆಯಿಂದ ಜರುಗಿತು. ಮಠಗಲ್ಲಿಯಲ್ಲಿ ದುರ್ಗಾಮಾತೆಗೆ ಮಹಾಮಂಗಳಾರತಿ ಸಲ್ಲಿಸಿ, ಪ್ರೇರಣಾ ಮಂತ್ರದೊಂದಿಗೆ ಧ್ವಜಾರೋಹಣ ನೆರವೇರಿಸುವುದರ ಮೂಲಕ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲರು ದೌಡ್‌ಗೆ ಅಧಿಕೃತ ಚಾಲನೆ ನೀಡಿದರು. ದೌಡ್ ಸಾಗಿದ ಪ್ರತಿ ಬೀದಿಯಲ್ಲೂ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ದುರ್ಗಾಮಾತೆಯ ಜಯಘೋಷಗಳುಮುಗಿಲುಮುಟ್ಟಿದವು. ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ನೂರಾರು ಶಿವಭಕ್ತರು, ಯುವಕ-ಯುವತಿಯರು ಹಾಗೂ ಪುಟಾಣಿಗಳು ಶಿವಾಜಿ ಮಹಾರಾಜರ ಗುಣಗಾನ ಮಾಡುತ್ತಾ, ಶಿಸ್ತುಬದ್ಧ ನೃತ್ಯ ಹಾಗೂ ಸಜೀವ ರೂಪಕಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಧಾರ್ಮಿಕ ಪರಂಪರೆಯನ್ನು ಬಿಂಬಿಸುವ ಈ ಮೆರವಣಿಗೆಯಲ್ಲಿ ವಿಶೇಷ ಪೂಜೆ ಮತ್ತು ವಿವಿಧ ಧಾರ್ಮಿಕ ವಿಧಿವಿಧಾನಗಳು ಯಶಸ್ವಿಯಾಗಿ ನೆರವೇರಿದವು.

Tags:

error: Content is protected !!