hubbali

ಆಹಾರ ಇಲಾಖೆ 1500 ಕೆಜಿ ಧಾನ್ಯ ಮಣ್ಣು ಪಾಲು : ರಸ್ತೆಯುದ್ದಕ್ಕೂ ಜೋಳ ಚೆಲ್ಲಾಪಿಲ್ಲಿ

Share

ಬಡವರ ಹೊಟ್ಟೆಗೆ ಆಹಾರವಾಗಬೇಕಿದ್ದ ಅನ್ನಭಾಗ್ಯದ ಧಾನ್ಯಗಳನ್ನು ರಸ್ತೆಯುದ್ದಕ್ಕೂ ಚೆಲ್ಲಿ ಮಣ್ಣು ಪಾಲು ಮಾಡಿದ ಶಾಪಕ್ಕೆ ಕುಂದಗೋಳ ಆಹಾರ ಇಲಾಖೆ ಗುರಿಯಾಗಿದೆ.

ಹೌದು ಅನ್ನಭಾಗ್ಯ ಯೋಜನೆಯಡಿ ಪಡಿತರ ಆಹಾರ ಸಾಮಗ್ರಿ ಸಾಗಿಸುವ ಲಾರಿಯಿಂದ 50 ಕೆಜಿ ತೂಕದ 30 ಜೋಳದ ಚೀಲಗಳು ಕುಂದಗೋಳ ತಾಲೂಕಿನ ಹಿರೇನೇರ್ತಿ – ಚಿಕ್ಕನೇರ್ತಿ ಮಾರ್ಗ ಮಧ್ಯೆ ರಸ್ತೆಯಲ್ಲೇ ಬಿದ್ದಿರುವುದು.

ಆಹಾರ ಇಲಾಖೆ ಸರಕು ಸಾಗಣೆ ಗುಣಮಟ್ಟತೆ ಹಾಗೂ ಆಹಾರ ಇಲಾಖೆ ಗೋದಾಮು ವ್ಯವಸ್ಥಾಪಕರು ಮತ್ತು ಆಹಾರ ನಿರೀಕ್ಷಕರ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕಳೆದ ಶನಿವಾರ 80ನೇ ಸ್ವಾತಂತ್ರ್ಯ ದಿನಾಚರಣೆ ದಿನವೇ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ಅನ್ನಭಾಗ್ಯದ ಧಾನ್ಯ ಸಾಗಿಸುವ ಕುಂದಗೋಳ ಆಹಾರ ಇಲಾಖೆಯ ಲಾರಿ ಧಾನ್ಯಗಳ ಚೀಲಗಳನ್ನು ಹೇರಿಕೊಂಡು ನ್ಯಾಯಬೆಲೆ ಅಂಗಡಿಗೆ ತಲುಪಿಸುವ ವೇಳೆ ಹಿರೇನೆರ್ತಿ – ಚಿಕ್ಕನೇರ್ತಿ ರಸ್ತೆ ಮಧ್ಯೆ ಬಡವರಿಗೆ ಸೇರಬೇಕಾದ ಧಾನ್ಯದ ಚೀಲಗಳು ರಸ್ತೆಗೆ ಬಿದ್ದು ರಾಶಿ ರಾಶಿ ಜೋಳ ಮಣ್ಣು ಪಾಲಾಗಿವೆ.

ಆಹಾರ ನಿರೀಕ್ಷಕ ಬಸವರಾಜ ಸಂಶಿ ಅವರನ್ನೂ ಈ ಘಟನೆ ಬಗ್ಗೆ ಕೇಳಿದ್ರೆ ರಸ್ತೆ ಮೇಲೆ ಬಿದ್ದಂತಹ ಧಾನ್ಯ ಗ್ರಾಹಕರಿಗೆ ನೀಡುವುದಿಲ್ಲ, ಬದಲಾಗಿ ಬೇರೆ ಧಾನ್ಯ ನೀಡುತ್ತೇವೆ ಎಂದಿದ್ದಾರೆ.

ಹಾಗಿದ್ರೇ ! ರಸ್ತೆಗೆ ಬಿದ್ದಂತಹ 1500 ಕೆಜಿ ಜೋಳದ ಧಾನ್ಯ ಲೆಕ್ಕ ಕೊಡುವವರು ಯಾರು ? ಆ ತಪ್ಪಿಗೆ ಯಾರಿಗೆ ಶಿಕ್ಷೆ ? ಇದಕ್ಕೆಲ್ಲಾ ಉತ್ತರ ನೀಡಬೇಕಾದ ತಹಶೀಲ್ದಾರ್ ರಾಜು ಮಾವರಕರ ಆಹಾರ ಧಾನ್ಯ ಸರಬರಾಜು ಲೋಪಕ್ಕೆ ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

Tags:

error: Content is protected !!