Dharwad

ಧಾರವಾಡ: ಹೆಚ್‌ಡಿಬಿಆರ್‌ಟಿಎಸ್ ‘ಚಿಗರಿ’ ಬಸ್ ಅವಾಂತರ – ಎಲ್ಲೆಂದರಲ್ಲಿ ಕೆಟ್ಟು ನಿಂತು ಪ್ರಯಾಣಿಕರ ಪರದಾಟ

Share

ಹುಬ್ಬಳ್ಳಿ-ಧಾರವಾಡ ಅವಳಿನಗರದ ಪ್ರಯಾಣಿಕರಿಗೆ ತ್ವರಿತ ಸಂಚಾರ ಸೇವೆ ನೀಡುವ ನಿಟ್ಟಿನಲ್ಲಿ ಆರಂಭವಾದ ಹೆಚ್‌ಡಿಬಿಆರ್‌ಟಿಎಸ್ ‘ಚಿಗರಿ’ ಬಸ್‌ಗಳ ಅವಾಂತರಗಳು ಒಂದಿಲ್ಲೊಂದು ರೀತಿಯಲ್ಲಿ ಮುಂದುವರೆಯುತ್ತಲೇ ಇವೆ. ಈ ಹಿಂದೆ ಅಪಘಾತಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದ ಚಿಗರಿ ಬಸ್‌ಗಳು, ಈಗ ಎಲ್ಲೆಂದರಲ್ಲಿ ಕೆಟ್ಟು ನಿಂತು ಪ್ರಯಾಣಿಕರನ್ನು ಪರದಾಡುವಂತೆ ಮಾಡುತ್ತಿವೆ.

ಹೌದು, ಭಾನುವಾರ ತಡರಾತ್ರಿ ಚಿಗರಿ ಬಸ್ ಒಂದು ಧಾರವಾಡದ ಜುಬ್ಲಿ ವೃತ್ತದಲ್ಲಿಯೇ ಕೆಟ್ಟು ನಿಂತಿದ್ದು, ಕೆಲಕಾಲ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಜುಬ್ಲಿ ವೃತ್ತದ ಚಿಗರಿ ಬಸ್ ನಿಲ್ದಾಣದಲ್ಲಿಯೇ ಬಸ್ ಕೆಟ್ಟು ನಿಂತಿದ್ದರಿಂದ ಹಿಂದೆ ಬರುವ ಬಸ್‌ಗಳ ಸಂಚಾರಕ್ಕೂ ಅಡಚಣೆಯುಂಟಾಯಿತು. ಇದರಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಒಂದೆಡೆ ಪರದಾಡಿದರೆ, ಇನ್ನೊಂದೆಡೆ ಹುಬ್ಬಳ್ಳಿಗೆ ಹೋಗಲು ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಇತ್ತೀಚಿನ ದಿನಗಳಲ್ಲಿ ಚಿಗರಿ ಬಸ್‌ಗಳಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗುತ್ತಿದ್ದು, ಪದೇ ಪದೇ ರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಅವಳಿನಗರದ ಸಾರ್ವಜನಿಕರ ಆಗ್ರಹವಾಗಿದೆ.

Tags:

error: Content is protected !!