Dharwad

ಗಾಮನಗಟ್ಟಿ ಗ್ರಾಮದಲ್ಲಿ 80ನೇ ಸ್ವಾತಂತ್ರ್ಯೋತ್ಸ್ ಸಂಭ್ರಮ, 500ಮೀಟರ್ ರಾಷ್ಟ ಧ್ವಜ ಮೇರವಣಿಗೆ…

Share

ಭಾರತ ದೇಶದಲ್ಲಿಂದ 80ನೇಯ ಸ್ವಾತಂತ್ರ್ಯೋತ್ಸ ಸಂಭ್ರಮ ಎಲ್ಲಡೆ ಮುಗಿಲು ಮುಟ್ಟಿದ್ದು, ಅನೇಕ ಕಡೆಗಳಲ್ಲಿ ವಿಭಿನ್ನವಾಗಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮಾಡಲಾಗುತ್ತಿದೆ‌. ಅದೇ ರೀತಿಯಾಗಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿ ಗ್ರಾಮದ ಎಫ್‌ಸಿಸಿ ಯುವಕರ ವತಿಯಿಂದ 500ಮೀಟರ್ ರಾಷ್ಟ್ರ ಧ್ವಜ ಮೇರವಣಿಗೆ ಮಾಡಲಾಯಿತು. ‌

ಗಾಮನಗಟ್ಟಿ ಗ್ರಾಮದ ಪ್ರಸಿದ್ಧ ಶ್ರೀ ಕರೆಯಮ್ಮ‌ ದೇವಸ್ಥಾನದಿಂದ 500ಮೀಟರ್ ರಾಷ್ಟ್ರ ಧ್ವಜವನ್ನು ಮೆರವಣಿಗೆಗೆ ಮಾಜಿಸೈನಿಕರು, ಪೊಲೀಸ ಇಲಾಖೆಯ ಸಿಬ್ಬಂದಿಗಳು ಚಾಲನೆ ನೀಡಿದ್ದು, ರಾಷ್ಟ್ರ ಧ್ವಜ ಬೃಹತ್ ಮೆರವಣಿಗೆಯನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಾಡಲಾಯಿತು. ಈ ವೇಳೆ ದೇಶ ಪ್ರೇಮ ಹೆಚ್ಚಿಸುವ ನಿಟ್ಡಿನಲ್ಲಿ ಭಾರತ ಮಾತಾ ಕೀ ಜೈ ಘೋಷಣೆಗಳು ಮೊಳಗಿದವು. ಇನ್ನೂ ಗ್ರಾಮದ ಹಿರಿಯರು, ಯುವ ಸಮುದಾಯ ಸೇರಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಧ್ವಜ ಹಿಡಿದು ಶಿಸ್ತು ಬದ್ಧವಾಗಿ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆಯಿತು. ಇನ್ನೂ ವೇಳೆ ಎಫ್‌ಸಿಸಿ ಕಮಿಟಿಯ ಅಧ್ಯಕ್ಷರಾದ ಸುಧಾಕರ್ ಮಾಳಗಿ, ಶಿವಾನಂದ ಬಿಸಗಲ್, ಯಲ್ಲಪ್ಪ ಬಾದರಬಂಡಿ, ಕರೆಪ್ಪ ಮುಮ್ಮಿಗಟ್ಟಿ, ರಾಜು ಬೆಂಗೇರಿ, ಕರಬಸಪ್ಪ ಅವರಾದಿ, ಅಶೋಕ್ ಜವಳಿ, ಶಿವಾನಂದ ಮಾಳಗಿ, ಗಿರೀಶ್ ಚಿಮಟ್ಟಪ್ಪನವರ, ಹಾಗೂ ಮಾಜಿ ಸೈನಿಕರು, ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!