Dharwad

ಸಚಿವ ಸಂತೋಷ ಲಾಡ್‌ರಿಂದ ಮುಂದುವರೆದ ಪ್ರಧಾನಿ‌ ಮೋದಿಯವರ ಕುರಿತು ಟೀಕೆ….

Share

ಪ್ರಧಾನಿ ಮೋದೊಯವರ ಬಗ್ಗೆ ನಾವು ಬಹಳ ವರ್ಷಗಳಿಂದ ಮಾತಾಡ್ತಿದ್ದೇವೆ.‌ ನಾವು ಮಾತಾಡುತ್ತಿರುವುದು ರಾಜಕೀಯವಾಗಿ ಹೊರತು, ವೈಯಕ್ತಿಕವಾಗಿ ಅಲ್ಲ ಎಂದು ಹೇಳುವ ಮೂಲಕ ಸಚಿವ ಸಂತೋಷ ಲಾಡ್ ಅವರು ಪ್ರಧಾನಿ‌ಮೋದಿಯವರ ಕುರಿತು ಟೀಕೆಯುವ ಇವತ್ತು ಕೂಡಾ ಮುಂದುವರೆದಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ‌ ಜಿಲ್ಲಾಡಳಿತದಿಂದ ನಗರದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗೊಯಾಗಿ ಧ್ವಜಾರೋಹಣ ನೇರವೇರಿಸಿದ ಬಳಿಕ ಪಥಸಂಚಲನ ವೀಕ್ಷಣೆ ಮಾಡಿದರು. ಧ್ವಾಜಾರೋಹನ ಮುಮ್ನ ದೇಶಕ್ಕಾಗಿ ಕೊಡುಗೆ ನೀಡಿದ ಮಹಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನೀಡಿದರು. ಬಳಿಕ ಮಾಧ್ಯಮಕ್ಕೆ ಮಾತನಾಡಿದ ಅವರು, ಪ್ರಧಾನಿಯವರು ಡಿಲಿಮಿಟೇಷನ ನೆಪವಾಗಿಟ್ಟುಕೊಂಡಿರೋದು ಬಹಿರಂಗವಾಗಿದೆ. ಅದ್ರೂ ಬಹಳ ದೊಡ್ಡದಾಗಿ ಭಾಷಣ ಮಾಡ್ತಾರೆ. ಸಾಪ್ಟವೇರ್ ಗಳೇ ನನ್ನ ದೇವರು ಅಂತಾರೆ. ಸಣ್ಣ ಸಾಪ್ಟವೇರ್, ಕೊಟ್ಟಿದ್ದಾರೆ ದೊಡ್ಡದು ಕೊಟ್ಟಿಲ್ಲ ಅಂತಾರೆ ಎಂದು ಟೀಕಿಸಿದ ಅವರು, ಇದೇವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ‌ಮುನಿಸಿಕೊಂಡಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರೆಯಿಸಿ, ಮಾಜಿ ಸಿಎಂ ಅವರಿಗೆ ಯಾವುದೇ ಅಸಮಾಧಾನ ಇಲ್ಲ, ಅವರು ಮುನಿಸಿಕೊಂಡಿಲ್ಲ. ಅದಾನಿ, ಅಡ್ವಾನಿ ಸಾಹೇಬರು ಮುನಿಸುಕೊಂಡಿದ್ದಾರೆ. ಪಿತಾಮಹ,ಬೀಷ್ಮ ಅಂದ ಅದಾನಿ, ಅಡ್ವಾನಿದೆ ಒಂದು ಬ್ಯಾನರ್ ಈಗ ಬಿಜೆಪಿ ಹಾಕ್ತಿಲ್ಲ. ಪೀತಾಮಹ, ಬೀಷ್ಮ ಅಂತ ಭಾಷಣ ಮಾಡಿದವರು ಸಣ್ಣ ಪೋಟೋ ಆದರೂ ಹಾಕಲಿ ಎಂದು ತಿರುಗೇಟು ಕೊಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರಿಂದ ವಿಜಯನಗರ ಧ್ವಜಾರೋಣ ಹಾಗೂ ಉಸ್ತುವಾರಿಯಿಂದ ವಿನಾಯತಿ ನೀಡಿ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಯವಾಗಿ ಲಾಡ್ ಅವರು ತಿರಸ್ಕರಿಸಿದರು. ಇನ್ನೂ ಧ್ವಜಾರೋಣ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಬೈಟ್ – ಸಂತೋಷ ಲಾಡ್, ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರು.

Tags:

error: Content is protected !!