ಬೆಳಗಾವಿಯ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿರುವ ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪಣದ ಮಾಜಿ ಅಧ್ಯಕ್ಷೆ ಪುಷ್ಪಾ ಪರ್ವತರಾವ್ ಅವರಿಗೆ ಪ್ರತಿಷ್ಠಿತ ‘ನ್ಯಾಷನಲ್ ರೋಟರಿ ಚಾಂಪಿಯನ್’ ಪ್ರಶಸ್ತಿ ಒಲಿದುಬಂದಿದೆ. ರೋಟರಿ ಇಂಟರ್ನ್ಯಾಷನಲ್ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರಿಗೆ ಈ ಗೌರವ ಸಮರ್ಪಿಸಲಾಯಿತು.


ಸಾಮಾಜಿಕ ಸೇವೆ ಮತ್ತು ಅತ್ಯುತ್ತಮ ನಾಯಕತ್ವ ಗುಣಗಳಿಗೆ ಹೆಸರುವಾಸಿಯಾಗಿರುವ ರೋಟರಿ ಕ್ಲಬ್ ಆಫ್ ಬೆಳಗಾಮ್ ದರ್ಪಣನ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಗವರ್ನರ್ಸ್ ಏಡ್ ಆರ್.ಟಿ.ಎನ್. ಪುಷ್ಪ ಪರ್ವತರಾವ್ ಅವರು ದೇಶದ ಉನ್ನತ ಮಟ್ಟದ “ನ್ಯಾಷನಲ್ ರೋಟರಿ ಚಾಂಪಿಯನ್” ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೋಟರಿ ಇಂಟರ್ನ್ಯಾಷನಲ್ ಅಧ್ಯಕ್ಷರಾದ ಆರ್.ಟಿ.ಎನ್. ಯಿಂಕಾ ಬಾಬಾ ಲೋಲಾ ಅವರ ಶುಭ ಹಸ್ತಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿಸ್ಟ್ರಿಕ್ಟ್ ಗವರ್ನರ್ ಲೆನ್ನಿ ಡಿ’ಕೋಸ್ಟಾ, ಮಾಜಿ ಗವರ್ನರ್‌ಗಳಾದ ಅವಿನಾಶ್ ಪೋತದಾರ್, ಶರದ್ ಪೈ, ಅರುಣ್ ಭಂಡಾರಿ ಹಾಗೂ ನಿಯೋಜಿತ ಗವರ್ನರ್‌ಗಳ ಸಮ್ಮುಖದಲ್ಲಿ ಈ ಅದ್ಧೂರಿ ಕಾರ್ಯಕ್ರಮ ನೆರವೇರಿತು. ಪುಷ್ಪ ಅವರ ನಿಸ್ವಾರ್ಥ ಸೇವೆ ಮತ್ತು ಸಮರ್ಪಣಾಭಾವವನ್ನು ಶ್ಲಾಘಿಸಿರುವ ಸಂಸ್ಥೆಯ ಹಾಲಿ ಅಧ್ಯಕ್ಷೆ ಡಾ. ಸ್ಪೂರ್ತಿ ಮತ್ತು ಕಾರ್ಯದರ್ಶಿ ಜ್ಯೋತಿ ಕುಲಕರ್ಣಿ ಸೇರಿದಂತೆ ಸಮಸ್ತ ಬೆಳಗಾವಿ ದರ್ಪಣ ತಂಡವು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.

