Dharwad

ಅ.18ರಂದು ವಿದ್ಯಾರ್ಥಿಗಳ ಹೋರಾಟಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ- ಕಮಿಷನರ್ ಎನ್ ಶಶಿಕುಮಾರ ಸ್ಪಷ್ಟನೆ.

Share

ಆಗಸ್ಟ್ 18ರಂದು ಧಾರವಾಡದ ಮಿಚಿಗನ್ ಕಂಪೌಂಡ್ ಬಳಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ ನಡೆಸಲು ಉದ್ದೇಶಿಸಿದ್ದ ಹೋರಾಟಕ್ಕೆ, ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ಮಾಡಿದ್ದು, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.‌

ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾ‌ರ್ ಅವರು, ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂತಕುಮಾರ ನೇತೃತ್ವದಲ್ಲಿ ನಡೆಯಬೇಕಿದ್ದ ಹೋರಾಟಕ್ಕೆ ಮಿಚಿಗನ್ ಕಂಪೌಂಡ್‌ನಲ್ಲಿ ಅವಕಾಶ ನೀಡುವುದಿಲ್ಲಿ. ಮಿಚಿಗನ್ ಕಂಪೌಂಡ್ ಸುತ್ತಮುತ್ತ ಹಲವು ಆಸ್ಪತ್ರೆಗಳಿದ್ದು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಶಾಂತಿ ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಲಾಗಿದೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ, ಹುಬ್ಬಳ್ಳಿಯ ನೆಹರು ಮೈದಾನದಲ್ಲಿ 100 ಮಂದಿ ಮಾತ್ರ, ನಿಗದಿತ ಅವಧಿಯಲ್ಲಿ ಸತ್ಯಾಗ್ರಹ ನಡೆಸಲು ಅವಕಾಶವಿದೆ ಎಂದು ಶಶಿಕುಮಾ‌ರ್ ತಿಳಿಸಿದ್ದಾರೆ.

ಬೈಟ್ ಎನ್ ಶಶಿಕುಮಾರ, ಹು-ಧಾ ಪೊಲೀಸ್ ಕಮಿಷನರ್.

Tags:

error: Content is protected !!