hubbali

ಬಾಂಗ್ಲಾ ನುಸುಳುಕೋರರನ್ನು ಡಿಸಿ,ಎಸ್ಪಿಗಳೇ ಸಾಕುತ್ತಿದ್ದಾರೆ: ಪ್ರಮೋದ್ ಮುತಾಲಿಕ್ ಕಿಡಿ..!

Share

ರಾಜ್ಯ ಗೃಹ ಇಲಾಖೆ ಶ್ಲಾಘನೀಯ ಕ್ರಮ ಕೈಗೊಂಡಿದೆ. ಬಾಂಗ್ಲಾ ನುಸುಳುಕೋರರನ್ನು ಗುರುತಿಸಿ ಹೊರಹಾಕುವ ಕೆಲಸ ಮಾಡುತ್ತಿದೆ.ಈ ಕ್ರಮಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಇದು ಮೊದಲೇ ಆಗಬೇಕಿತ್ತು, ಈಗಲಾದ್ರು ಆಗ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಭಿನಂದನೆಗಳು ಎಂದು ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಆರ್ ಟಿ ಐ ಮೂಲಕ ನಾವು ಈ ಹಿಂದೆ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಕೇಳಿದ್ದೆವು.ನಿಮ್ಮ ಜಿಲ್ಲೆಯಲ್ಲಿ ಎಷ್ಟು ಬಾಂಗ್ಲಾ ಅಕ್ರಮ ನುಸುಳುಕೋರರು ಇದ್ದಾರೆ ಅಂತ ಕೇಳಿದ್ದೆವು. ಆಗ ಎಲ್ಲರು ನಮ್ಮ ಜಿಲ್ಲೆಯಲ್ಲಿ ಯಾರು ಇಲ್ಲಾ ಅಂತ ಮಾಹಿತಿ ನೀಡಿದ್ದರು. ಆದ್ರೆ ಗೃಹ ಸಚಿವರು ಹೇಳಿದ ಮೇಲೆ ಹೇಗೆ ಅಕ್ರಮ ಬಾಂಗ್ಲಾ ನುಸುಳುಕೋರರು ಸಿಕ್ಕರು..? ಡಿಸಿ ಎಸ್ಪಿ ಗಳೇ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಸಾಕುತ್ತಿದ್ದಾರೆ ಎಂದರು.

ಚಿಕ್ಕಮಗಳೂರುನಲ್ಲಿ ಬಾಂಗ್ಲಾ ಮಾರ್ಕೆಟ್ ಇದೆ. ಪರಪ್ಪನ ಅಗ್ರಹಾರ ಇದೆ ಬಾಂಗ್ಲಾ ಕ್ಯಾಂಟಿನ್, ಸಲೂನ್ ಇದೆ. ಬೆಳಗಾವಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಗೆ ಸ್ಪರ್ಧೆ ಮಾಡ್ತೇನೆ ಅಂತ ಅರ್ಜಿ ಹಾಕಿದ್ದಾನೆ. ಕಾಂಗ್ರೆಸ್ ಸರ್ಕಾರ ಎಚ್ಚರಗೊಂಡು ಹೊರಹಾಕಲು ಮುಂದಾಗಿದ್ದು ಶ್ವಾಘನೀಯ. ಇದು ಇಲ್ಲಿಗೆ ನಿಲ್ಲಬಾರದು, ನಿರಂತರವಾಗಿರಬೇಕು. ಒಬ್ಬನೇ ಒಬ್ಬ ರೋಹಿಂಗ್ಯಾ ಮುಸ್ಲಿಂರು ಇರಬಾರದು. ಅವರು ಕಳ್ಳತನ, ಡ್ರಗ್ ಮಾಪೀಯಾ ಮಾಡ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ಸಹಾಯದಿಂದ ಆವರನ್ನು ಹೊರಹಾಕಬೇಕು. ರಾಜ್ಯದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರ ನಡೆಸಿದೆ. ಆಗ ಬಿಜೆಪಿಯವರು ಏನು ಮಾಡಲಿಲ್ಲಾ. ಬಿಜೆಪಿ ಎಂ ಪಿ, ಎಂ ಎಲ್ ಎ ಕ್ಷೇತ್ರದಲ್ಲಿಯೇ ಸಾವಿರಾರು ಅಕ್ರಮ ಬಾಂಗ್ಲಾ ನುಸುಳುಕೋರರು ಇದ್ದಾರೆ. ಚುನಾವಣೆ ಬಂದಾಗ ಬಾಂಗ್ಲಾ ನುಸುಳುಕೋರರ ಬಗ್ಗೆ ಬಿಜೆಪಿಯವರು ಮಾತಾಡ್ತಾರೆ. ನಂತರ ಯಾವುದೇ ಕ್ರಮ ಕೈಗೊಳ್ಳೋದಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:

error: Content is protected !!