ಪ್ರಸ್ತುತ ವರ್ಷ ಕರ್ನಾಟಕದ ಸಾಕಷ್ಟು ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು ರೈತರು ಮುಂಗಾರು ಬೆಳೆ ಕಳೆದುಕೊಂಡಿದ್ದಾರೆ ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ರೈತರಿಗೆ ಮಧ್ಯಂತರ ಪರಿಹಾರ ಕೊಡಬೇಕು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಒತ್ತಾಯ ಮಾಡಿದರು.


ನಗರದಲ್ಲಿಂದು ಪ್ರವಾಸಿ ಮಂದಿರದಲ್ಲಿ ಬರಗಾಲ ಹಿನ್ನೆಲೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು,
ರೈತರು ಸಂಪೂರ್ಣವಾಗಿ ಆರ್ಥಿಕವಾಗಿ ಬೀದಿಗೆ ಬಿದ್ದಿದ್ದಾರೆ ಕರ್ನಾಟಕ ಹಾಗೂ ಅದರಲ್ಲೂ
ಧಾರವಾಡ ಜಿಲ್ಲೆಯ ಸರಿಯಾಗಿ ಮಳೆ ಆಗಲಿಲ್ಲ ಸಾಕಷ್ಟು ಬರಗಾಲ ಬಿದ್ದಿದೆ. ಸರಕಾರ ಯಾವುದೇ ಕುಂಟು ನೆಪೆ ಹೇಳದೇ ಪರಿಹಾರ ಕೊಡಬೇಕು
ಬರಗಾಲದಿಂದ ಸರಿಯಾಗಿ ಫಸಲು ಬಂದಿಲ್ಲ ಇದೊಂದು ಹಸಿರು ಬರಗಾಲ ಅಂತಾ ಘೋಷಣೆ ಮಾಡಬೇಕು ಕೇವಲ ಫಸಲು ಬಂದಿದೆಆದರೆ ಬೆಳೆಗೆ ತಕ್ಕ ಫಸಲು ಅದು ಅಲ್ಲಾ. ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಯಾವ ರೈತರು ಬೆಳೆ ಪರಿಹಾರಕ್ಕೆಅರ್ಜಿ ಹಾಕಿದ್ದಾರೆ ತಾತ್ಕಾಲಿಕವಾಗಿ 25 ರೂಪಾಯಿ ಕೊಡಬೇಕು ಸಾಲ ಸೂಲ ಮಾಡಿ ಬೀಜ ಗೊಬ್ಬರ ಹಾಕಿ ಆರ್ಥಿಕವಾಗಿ ತೊಂದರೆ ಅನುಭವಿಸತಾ ಇದ್ದಾರೆಮೊದಲು ಧಾರವಾಡ ಜಿಲ್ಲೆಯನ್ನ ಬರಗಾಲ ಘೋಷಣೆ ಮಾಡಬೇಕು ಪರಿಹಾರ ಸಹ ಘೋಷಣೆ ಮಾಡಬೇಕು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಸಹದೇವ ಕಟ್ನೂರು ಮಾತನಾಡಿ, ಸಹಕಾರ ಸಂಘಗಳಿಗೆ ಆರ್ಥಿಕ ಸಹಾಯ ಸರ್ಕಾರ ಮಾಡಬೇಕು ರೈತರು ಬದುಕಿಗೆ ಸಹಕಾರಿ ಸಂಘಗಳು ಆಧಾರ ಎಂದರು
ಬೈಟ್ : ಕೃಷಿಕ ಸಮಾಜ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾಹಾಂತೇಶ ಕಮತ
