ಬೆಳಗಾವಿ ನಗರದ ಜನತೆಗೆ ಇನ್ಮುಂದೆ ಅತ್ಯಾಧುನಿಕ ಹಾಗೂ ಗುಣಮಟ್ಟದ ವೈದ್ಯಕೀಯ ತಪಾಸಣಾ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗಲಿವೆ. ಸದಾಶಿವ ನಗರದಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ‘ಕಾಮಾಖ್ಯಾ ಡೈಗ್ನಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯ’ದ ಉದ್ಘಾಟನಾ ಸಮಾರಂಭವು ಮೇ 24ರ ಭಾನುವಾರ ನಡೆಯಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ
ಬೆಳಗಾವಿಯಲ್ಲಿಂದು ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಕಾಮಾಖ್ಯಾ ಮೆಡ್ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ್ ಎಂ. ಕವೀಶ್ವರ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಅನಿಲ ಪಾಟೀಲ ಜಂಟಿಯಾಗಿ ಮಾಹಿತಿ ನೀಡಿದರು. ನಗರದ ಸದಾಶಿವ ನಗರದ ವನ್‌ನೆಸ್ ಪ್ರೈಡ್ ಕಟ್ಟಡದಲ್ಲಿ ನಿರ್ಮಿಸಲಾಗಿರುವ ಈ ಅತ್ಯಾಧುನಿಕ ಪ್ರಯೋಗಾಲಯದ ನೂತನ ಕಟ್ಟಡವನ್ನು ಮೇ 24ರ ರವಿವಾರ ಬೆಳಿಗ್ಗೆ 11:30ಕ್ಕೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದಾರೆ. ಕಾರಂಜಿಮಠದ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರುಗಳಾದ ಅಭಯ ಪಾಟೀಲ, ಆಸೀಫ್ ಸೇಠ್, ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಡಿಸಿಪಿ ನಾರಾಯಣ ಭರಮನಿ ಸೇರಿದಂತೆ ಬಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ್ ಶೆಟ್ಟಿ ಹಾಗೂ ಡಿಹೆಚ್‌ಒ ಡಾ. ಐ. ಪಿ. ಗಡಾದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಪ್ರಕಟಿಸಿದರು.

ಪ್ಯಾರಾ 2: ಮುಂದುವರಿದು ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿ, ಈ ಪ್ರಯೋಗಾಲಯವು ರಾಷ್ಟ್ರೀಯ ಮಾನ್ಯತೆ (NABL) ಹೊಂದಿದ್ದು, ಅತ್ಯಂತ ನಿಖರ ಹಾಗೂ ಗುಣಮಟ್ಟದ ವರದಿಗಳನ್ನು ನೀಡಲು ಬದ್ಧವಾಗಿದೆ ಎಂದರು. ಇಲ್ಲಿ ಸಾಮಾನ್ಯ ರಕ್ತ ಪರೀಕ್ಷೆಗಳು, ಇಸಿಜಿ, ಶ್ವಾಸಕೋಶದ ಸಾಮರ್ಥ್ಯ ತಿಳಿಯುವ ಪಿಎಫ್ಟಿ, ಶ್ರವಣದೋಷ ತಪಾಸಣೆಯ ಆಡಿಯೋಮೆಟ್ರಿ ಸೇರಿದಂತೆ ಫ್ಯಾಕ್ಟರಿ ನೌಕರರ ವಾರ್ಷಿಕ ಆರೋಗ್ಯ ತಪಾಸಣೆ (Periodic Occupational Health Checkup) ಹಾಗೂ ಪ್ರಿ-ಎಂಪ್ಲಾಯ್ಮೆಂಟ್ ಹೆಲ್ತ್ ಚೆಕಪ್‌ಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ವಯೋವೃದ್ಧರು ಮತ್ತು ಆಸ್ಪತ್ರೆಗೆ ಬರಲಾಗದ ರೋಗಿಗಳಿಗೆ ಅನುಕೂಲವಾಗುವಂತೆ ಮನೆಗೇ ತೆರಳಿ ರಕ್ತದ ಮಾದರಿ ಸಂಗ್ರಹಿಸುವ (Home Collection) ವಿಶಿಷ್ಟ ಸೌಕರ್ಯವನ್ನೂ ಸಹ ಒದಗಿಸಲಾಗುತ್ತಿದ್ದು, ನಗರದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಲ್ಯಾಬ್‌ನ ಮುಖ್ಯಸ್ಥರಾದ ಡಾ. ಪ್ರೀತಿ ಎಸ್ ಮೇದಾರ ಹಾಗೂ ಡಾ. ಬಾಬುರಾವ ಗೋಗಲೆ ಉಪಸ್ಥಿತರಿದ್ದರು.

