ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶಿರಕೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಂಜಿಎನ್ಆರ್ಜಿ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರ ಇಲ್ಲಿಯವರೆಗೂ ನಡೆದಿಲ್ಲ. ನಿರಂತರವಾಗಿ ಪಂಚಾಯತಿ ವತಿಯಿಂದ ದುಡಿಯುವ ಕೆಲಸಗಾರರಿಗೆ ನರೇಗಾ ಕೆಲಸ ಪಂಚಾಯತಿ ನೀಡುತ್ತಾ ಬಂದಿದ್ದು, ನಿಗದಿತ ಸಂಬಳವನ್ನು ಸಕಾಲಕ್ಕೆ ನೀಡುತ್ತಿದ್ದಾರೆ ಎಂದು ನರೇಗಾ ಕಾಮಗಾರಿ ಕೆಲಸಗಾರ ತಿಪ್ಪಣ್ಣ ಸ್ಪಷ್ಟಪಡಿಸಿದರು.

ಈ ಕುರಿತು ಶಿರಕೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ 13ನೇ ಬ್ಲಾಕ್ ನಂಬರ್ನಲ್ಲಿ ಕಾಲುವೆ ಹೂಳು ಎತ್ತುವ ನರೇಗಾ ಕಾಮಗಾರಿ ಕೆಲಸದ ಸ್ಥಳದಿಂದ ಸ್ಪಷ್ಟನೆ ನೀಡಿದ ಅವರು, ಪಂಚಾಯತಿ ವತಿಯಿಂದ ಇಂದು 13 ನೇ ಬ್ಲಾಕ್ನಲ್ಲಿ ಕಾಲುವೆ ಹೂಳು ಎತ್ತು ಕೆಲಸ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ನಾವು ನರೇಗಾ ಕೆಲಸ ಮಾಡುತ್ತಾ ಬಂದಿದ್ದು, ಈಗಲೂ ಮಾಡುತ್ತಿದ್ದೇವೆ. ಅವ್ಯವಹಾರ ಆರೋಪ ಸರಿಯಲ್ಲ. ದುಡಿದು ತಿನ್ನುವವರಿಗೆ ಪಂಚಾಯತಿಯವರು ನರೇಗಾ ಕೆಲಸ ಮಾಡುತ್ತಿದ್ದೇವೆ.

ಈಗಲೂ ಹದಿನೈದು ಜನ ದುಡಿಯುತ್ತಿದ್ದೇವೆ ಎಂದು ಹೇಳಿದರು. ಜತೆಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾಶವ್ವಾ ಮಾತನಾಡಿ, ಪಂಚಾಯತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡುತ್ತಾ ಬರಲಾಗುತ್ತಿದೆ. ಈಗ ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ ಸತ್ಯಕ್ಕೆ ದುರುವಾದ ಆರೋಪವಾಗಿದೆ. ಪ್ರಸ್ತುತ ಈಗ ಎಂಜಿಎನ್ಆರ್ಜಿ ಕಾಮಗಾರಿಯಲ್ಲಿ ಪಂಚಾಯತಿ ವ್ಯಾಪ್ತಿಯ 13ನೇ ಬ್ಲಾಕನಲ್ಲಿ ಕಾಕುವೆ ಹೂಳು ಎತ್ತುವ ಕಾಮಗಾರಿ ನಡೆಯುತ್ತಿದ್ದು, ಇನ್ನಷ್ಟು ಕಾಮಗಾರಿಯನ್ನು ಸದ್ಯದಲ್ಲಿಯೇ ಆರಂಭಿಸುತ್ತೇವೆ. ನರೇಗಾ ಕೆಲಸಕ್ಕೆ ಬರುವ ಜನರಿಗೆ ಅವರದೇ ಖಾತೆಗೆ ಅವರ ಶ್ರಮದ ಫಲವನ್ನು ನೀಡಲಾಗುತ್ತಿದೆ. ಕೆಲವು ಶಕ್ತಿಗಳು ದುರುದ್ದೇಶದಿಂದ ಸುಳ್ಳು ಆರೋಪಗಳ ಮಾಡುತ್ತಿರುವುದು ಸರಿಯಲ್ಲ, ಆರೋಪ ಮಾಡುವವರು ನರೇಗಾ ಕಾಮಗಾರಿ ನಡೆಯುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿ ಬಳಿಕ ಸತ್ಯದ ಬಗ್ಗೆ ತಿಳಿಯಬೇಕು ಎಂದು ಮನವಿ ಮಾಡಿದರು.
