ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಕೆರೆ ತುಂಬಿಸಲು ಗ್ರಾಮಸ್ಥರು ಈಗ ಸೊಂಟ ಕಟ್ಟಿ ನಿಂತಿದ್ದಾರೆ. ಬಸರೀಕಟ್ಟಿ, ಶಿಂದೋಳಿ ಹಾಗೂ ಮುತಗೆ ಭಾಗದ ಸುಮಾರು ಒಂದೂವರೆ ಕಿಲೋಮೀಟರ್ ಉದ್ದದ ಕಾಲುವೆಯನ್ನು ರೈತರೇ ಸ್ವಯಂಪ್ರೇರಿತರಾಗಿ ಪುನರುಜ್ಜೀವನಗೊಳಿಸುತ್ತಿದ್ದಾರೆ.

ಮುತಗಾ ಗ್ರಾಮದ ಕೆರೆಗೆ ನೀರು ಹರಿಸುವ ಉದ್ದೇಶದಿಂದ ಹೂಳು ತುಂಬಿದ್ದ ಹಾಗೂ ಪಾಳುಬಿದ್ದಿದ್ದ ಕಾಲುವೆಯನ್ನು ಸ್ವಚ್ಛಗೊಳಿಸುವ ಬೃಹತ್ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಬಸರೀಕಟ್ಟಿ, ಶಿಂದೋಳಿ ಮತ್ತು ಮುತಗೆ ಗ್ರಾಮಗಳ ಶೇತವಡಿಯ ಮೂಲಕ ಹಾದುಹೋಗುವ ಸುಮಾರು 1.5 ಕಿಲೋಮೀಟರ್ ಉದ್ದದ ಈ ಕಾಲುವೆಯ ಸ್ವಚ್ಛತೆ ಮತ್ತು ಪುನರುಜ್ಜೀವನ ಕಾರ್ಯಕ್ಕೆ ಗ್ರಾಮಸ್ಥರು ಚಾಲನೆ ನೀಡಿದ್ದಾರೆ. ಈ ಮಹತ್ವದ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಬಸವಂತ ಕಡೆಮಣಿ ಅವರು ಮಾರ್ಗದರ್ಶನ ನೀಡುತ್ತಿದ್ದು, ಗ್ರಾಮದ ನೂರಾರು ರೈತರು, ನಾಗರಿಕರು ಹಾಗೂ ‘ಆಪ್ಲೆ ಸೇವೆಕರಿ’ (Aaple Sevekari) ಗ್ರೂಪ್‌ನ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಕೆರೆ ತುಂಬಿಸುವ ಮೂಲಕ ಅಂತರ್ಜಲ ವೃದ್ಧಿ ಹಾಗೂ ಕೃಷಿಗೆ ಅನುಕೂಲ ಮಾಡಿಕೊಡುವ ಈ ಸಮುದಾಯದ ಶ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
